ನಾನು ತಪ್ಪು ಮಾಡಿದ್ದೇನೆ. ರಂಜಿತ್ ನನ್ನ ನಾನೇ ಬಲಿ ಪಶು ಮಾಡಿದೇ ಅನಿಸುತ್ತಿದೆ. ನನ್ನ ಹೆಂಡ್ತಿಗೆ ನಾನು ಪ್ರಾಮಿಸ್ ಮಾಡಿಯೇ ಬಂದಿದ್ದೆ. ಆದರೆ ಅದನ್ನು ನನ್ನಿಂದ ಉಳಿಸಿಕೊಳ್ಳಲು ಸಾಧ್ಯವೇ ಆಗಲಿಲ್ಲ. ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಕನಸುಗಳನ್ನ ಕಂಡ ಜನರಿದ್ದಾರೆ. ನನ್ನ ವಯಸ್ಸಿಗೆ ಅವರಿಗೆ ನಾನು ಸಪೋರ್ಟ್ ಮಾಡಬಹುದಿತ್ತು. ಆದರೆ, ನಾನು ಅತಿ ದೊಡ್ಡ ತಪ್ಪು ಮಾಡಿದ್ದೇನೆ ಎಂದು ಜಗದೀಶ್ ಹೇಳಿದ್ದಾರೆ.
ನನ್ನಿಂದ ತುಂಬಾನೆ ತಪ್ಪಾಗಿದೆ. ನಾನು ಎಲ್ಲರಿಗೂ ಸಾರಿ ಕೇಳುತ್ತೇನೆ. ಫ್ಲೋದಲ್ಲಿ ಏನೋ ಬಂದು ಬಿಡ್ತು. ಹೆಣ್ಣುಮಕ್ಕಳಿಗೆ ಕೆಟ್ಟದಾಗಿಯೆ ಮಾತನಾಡಿದ್ದೇನೆ. ನನ್ನಿಂದ ತಪ್ಪಾಗಿದೆ. ಈ ರೀತಿ ಮಾತನಾಡಲೇ ಬಾರದಿತು. ನನ್ನಿಂದ ತಪ್ಪಾಗಿದೆ. ನನ್ನಿಂದಲೇ ರಂಜಿತ್ ಹೊರಗೆ ಹೋಗಿದ್ದಾರೆ. ನನ್ನಿಂದಲೇ ರಂಜಿತ್ ಬಲಿ ಪಶು ಆದ್ರು ಅನಿಸುತ್ತಿದೆ ಎಂದು ಜಗದೀಶ್ ಕ್ಷಮೆ ಕೇಳಿದ್ದಾರೆ.
ನಾನು ಮನೆಯಲ್ಲಿ ಯಾವುದೇ ರೀತಿಯ ಜಗಳವನ್ನ ಮಾಡೋದಿಲ್ಲ. ಯಾರ ಜೊತೆಗೂ ಜಗಳ ಆಡೋದಿಲ್ಲ. ನೀಟ್ ಆಗಿಯೇ ಆಡಿ ಬರುತ್ತೇನೆ ಎಂದು ಹೆಂಡತಿಗೆ ಪ್ರಾಮಿಸ್ ಮಾಡಿ ಬಂದಿದ್ದೆ. ಆದರೆ, ನನ್ನಿಂದ ಅದು ಸಾಧ್ಯವೇ ಆಗಲಿಲ್ಲ. ನಾನು ತಪ್ಪು ಮಾಡಿ ಬಿಟ್ಟೆ. ಸಾಧ್ಯವಾದ್ರೆ ನನ್ನ ನೀವು ವಾಪಾಸ್ ಮನೆಯೊಳಗೆ ಕರೆದುಕೊಳ್ಳಿ ಅಂತಲೂ ಜಗದೀಶ್ ಮನವಿ ಮಾಡಿದ್ರು
ಜಗದೀಶ್ ಮಾತುಗಳು ಮುಗಿದ್ಮೇಲೆ ಸುದೀಪ್ ಮನೆಯ ಸದಸ್ಯರಿಂದ ಅಭಿಪ್ರಾಯ ಕೇಳಿದ್ರು. ಜಗದೀಶ್ ಮಾತುಗಳಿಂದ ಏನು ಕಲಿತುಕೊಂಡಿದ್ದೀರಾ ಅನ್ನೋದನ್ನ ಕೇಳಿದ್ರು. ಹಾಗಾಗಿಯೇ ಎಲ್ಲರೂ ತಮ್ಮ ಅಭಿಪ್ರಾಯವನ್ನ ಇಲ್ಲಿ ವಿಭಿನ್ನವಾಗಿಯೇ ಇಲ್ಲಿ ಹೇಳಿದ್ರು. ಇವರೆಲ್ಲ ಮಾತುಗಳಲ್ಲಿ ಒಂದು ಗಿಲ್ಟ್ ಎದ್ದು ಕಾಣಿಸುತ್ತಿತ್ತು. ಇನ್ನೂ ಮನೆಯಿಂದ ಹೊರ ಹಾಕಲಾಗಿರುವ ಜಗದೀಶ್ ಅವರನ್ನು ಮತ್ತೆ ಮನೆಯೊಳಗೆ ಕರೆಸಿಕೊಳ್ಳುವ ಯಾವುದೇ ಆಲೋಚನೆ ಇಲ್ಲ ಎಂದು ಸುದೀಪ್ ಸ್ಪಷ್ಟಪಡಿಸಿದರು.