ಬಾಲಿವುಡ್ ಸ್ಟಾರ್ ಜೋಡಿ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಮಧ್ಯೆ ಎಲ್ಲವೂ ಸರಿಯಾಗಿಲ್ಲ. ಈ ಜೋಡಿ ಬೇರೆ ಬೇರೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಲೆ ಇದೆ. ಆದರೆ ಈ ಬಗ್ಗೆ ದಂಪತಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಇಬ್ಬರು ಕಾರ್ಯಕ್ರಮಗಳಿಗೆ ಪ್ರತ್ಯೇಕವಾಗಿಯೇ ತೆರಳುತ್ತಿದ್ದಾರೆ ಎನ್ನಲಾಗಿದೆ. ಈಗ ಅಭಿಷೇಕ್ ಹಾಗೂ ಐಶ್ವರ್ಯಾ ಪ್ರತ್ಯೇಕವಾಗಲು ಬಾಲಿವುಡ್ನ ನಟಿಯೊಬ್ಬರು ಕಾರಣ ಎಂದು ಹೇಳಲಾಗುತ್ತಿದ್ದು ಆ ನಟಿ ಯಾರು ಎಂಬ ಮಾಹಿತಿ ಇಲ್ಲಿದೆ.
ಪ್ರೀತಿಸಿ ಮದುವೆಯಾಗಿದ್ದ ಐಶ್ವರ್ಯಾ ಹಾಗೂ ಅಭಿಷೇಕ್ ಮಧ್ಯೆ ಮನಸ್ತಾಪ ಮೂಡಿದೆ. ಅದೇ ಕಾರಣಕ್ಕೆ ಇಬ್ಬರು ದೂರ ದೂರವಾಗಿದ್ದು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಐಶ್ವರ್ಯಾ ಮಗಳು ಆರಾಧ್ಯಾ ಜೊತೆ ತಮ್ಮ ತಾಯಿ ಮನೆಯಲ್ಲಿ ಇದ್ದಾರೆ ಎನ್ನಲಾಗಿದೆ. ಆದರೆ, ಇವರು ಕಾನೂನಾತ್ಮಕವಾಗಿ ವಿಚ್ಛೇದನ ಪಡೆಯೋ ಆಲೋಚನೆಯಲ್ಲಿ ಇಲ್ಲವಂತೆ. ಐಶ್ವರ್ಯಾಗೆ ಸಮಸ್ಯೆ ಆಗುತ್ತಿರುವುದು ಪತಿಯಿಂದಲೇ ಎನ್ನಲಾಗಿದೆ.
ಅಭಿಷೇಕ್ ಬಚ್ಚನ್ಗೆ ತಮ್ಮ ನಟನಾ ವೃತ್ತಿಯ ಬಗ್ಗೆ ಅಭದ್ರತೆ ಕಾಡುತ್ತಿದೆ. ಇದೇ ವೇಳೆ ಅವರು ನಟಿ ನಮೃತ್ ಕೌರ್ ಜೊತೆ ರಿಲೇಶನ್ಶಿಪ್ ಹೊಂದಿದ್ದಾರೆ ಎಂದು ಕೂಡ ವರದಿ ಆಗಿದೆ. ಈ ಸುದ್ದಿ ಕೇಳಿ ಅಭಿಷೇಕ್ ಹಾಗೂ ಐಶ್ವರ್ಯಾ ಅಭಿಮಾನಿಗಳಿಗೆ ಶಾಕ್ ಆಗಿದೆ.
ಅಭಿಷೇಕ್ ಬಚ್ಚನ್ ಅವರು ತಮ್ಮ ಫೇಲ್ಯೂವರ್ಗಳ ಬಗ್ಗೆ ಬೇಸರದಲ್ಲಿ ಇದ್ದಾರೆ. ಅವರ ಯಾವ ಸಿನಿಮಾಗಳೂ ಹಿಟ್ ಆಗುತ್ತಿಲ್ಲ. ‘ದಾಸ್ವಿ’ ಸಿನಿಮಾದ ಶೂಟ್ ವೇಳೆ ಅವರು ನಮೃತ್ ಕೌರ್ ಜೊತೆ ಆಪ್ತತೆ ಬೆಳೆ ಸಿಕೊಂಡಿದ್ದರು. ನಮೃತಾ ಅವರು ಅಭಿಷೇಕ್ ವಿಚಾರದಲ್ಲಿ ಗಂಭೀರವಾಗಿದ್ದರು. ಆ ಬಳಿಕ ತಪ್ಪು ಅರಿತ ಅಭಿಷೇಕ್ ಅವರು ನಮೃತಾರನ್ನು ಕೈಬಿಟ್ಟರು. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಸದ್ಯ ಬಾಲಿವುಡ್ ಅಂಗಳದಲ್ಲಿ ಇಂಥದೊಂದು ಸುದ್ದಿ ಹರಿದಾಡುತ್ತಿದೆ. ಇದೇ ಕಾರಣಕ್ಕೆ ಐಶ್ವರ್ಯಾ ಹಾಗೂ ಅಭಿಷೇಕ್ ಮಧ್ಯೆ ಮನಸ್ತಾಪ ಮೂಡಿದೆ ಎನ್ನಲಾಗುತ್ತಿದೆ.