ತಾಯಿಯನ್ನು ಕಳೆದುಕೊಂಡಿರುವ ನೋವಿನಲ್ಲಿರುವ ನಟ ಸುದೀಪ್ ತಾಯಿಯ ಕುರಿತು ಸುದೀರ್ಘವಾದ ಭಾವುಕ ಟ್ವೀಟ್ವೊಂದನ್ನು ಹಂಚಿಕೊಂಡಿದ್ದಾರೆ.
ನನ್ನ ತಾಯಿ, ಯಾವುದೇ ಪಕ್ಷಪಾತವಿಲ್ಲದ, ಅತ್ಯಂತ ಪ್ರೀತಿಯ, ಕ್ಷಮಿಸುವ, ಕಾಳಜಿ ವಹಿಸುವ ಮತ್ತು ಪ್ರೀತಿಯನ್ನು ಕೊಡುವ ನನ್ನ ಬದುಕಿನಲ್ಲಿ ಮೌಲ್ಯಯುತವಾದನ್ನು ತೋರಿಸಿದವಳು ಮತ್ತು ಯಾವಾಗಲೂ ಅದನ್ನು ಪಾಲಿಸುವ ಮೌಲ್ಯವನ್ನು ಹೇಳಿಕೊಟ್ಟ ಜೀವವದು. ಬದುಕಿನಲ್ಲಿ ನನ್ನ ಪಕ್ಕದಲ್ಲಿಯೇ ಇದ್ದ ಮಾನವ ರೂಪದ ನಿಜವಾದ ದೇವರಾಗಿದ್ದರು ನನ್ನಮ್ಮ ಎಂದು ಬರೆದುಕೊಂಡಿದ್ದಾರೆ.
ನಟ ಸುದೀಪ್ ತಾಯಿ ಸರೋಜ ಅವರು ಅ.20ರಂದು ಬೆಳಗ್ಗೆ ಇಹಲೋಕ ತ್ಯಜಿಸಿದರು. ನ್ಯುಮೋನಿಯದಿಂದ ಬಳಲುತ್ತಿದ್ದ ಸುದೀಪ್ ತಾಯಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಅ.20ರಂದು ಸಂಜೆ ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿತುನನ್ನ ತಾಯಿ, ಯಾವುದೇ ಪಕ್ಷಪಾತವಿಲ್ಲದ, ಅತ್ಯಂತ ಪ್ರೀತಿಯ, ಕ್ಷಮಿಸುವ, ಕಾಳಜಿ ವಹಿಸುವ ಮತ್ತು ಪ್ರೀತಿಯನ್ನು ಕೊಡುವ ನನ್ನ ಬದುಕಿನಲ್ಲಿ ಮೌಲ್ಯಯುತವಾದನ್ನು ತೋರಿಸಿದವಳು ಮತ್ತು ಯಾವಾಗಲೂ ಅದನ್ನು ಪಾಲಿಸುವ ಮೌಲ್ಯವನ್ನು ಹೇಳಿಕೊಟ್ಟ ಜೀವವದು. ಬದುಕಿನಲ್ಲಿ ನನ್ನ ಪಕ್ಕದಲ್ಲಿಯೇ ಇದ್ದ ಮಾನವ ರೂಪದ ನಿಜವಾದ ದೇವರಾಗಿದ್ದರು ನನ್ನಮ್ಮ.
ನನಗೆ ಹಬ್ಬ ಎಂದರೆ ಅದು ನನ್ನ ತಾಯಿ. ನನ್ನ ಮೊದಲ ಅಭಿಮಾನಿ, ಹಿತೈಷಿ ಎಲ್ಲವೂ ಅವರಾಗಿದ್ದರು. ಕೆಟ್ಟ ಕೆಲಸವನ್ನೂ ಇಷ್ಟಪಟ್ಟವರು, ಒಳ್ಳೆಯ ಕೆಲಸ ಮಾಡಿದಾಗಲಂತೂ ಬೆನ್ನು ತಟ್ಟಿ ಸಂಭ್ರಮಿಸಿದವರು. ಈಗ ಆ ಎಲ್ಲ ಸುಂದರ ಘಳಿಗೆಗಳು ನೆನಪು ಮಾತ್ರ.
ನಾನೀಗ ಅನುಭವಿಸುತ್ತಿರುವ ಸಂಕಟವನ್ನು ಹಂಚಿಕೊಳ್ಳಲು ನನ್ನಲ್ಲಿ ಪದಗಳಿಲ್ಲ. ಅವರಿಲ್ಲದ ಶೂನ್ಯವನ್ನು ಒಪ್ಪಿಕೊಳ್ಳಲು ನನ್ನಿಂದ ಆಗುತ್ತಿಲ್ಲ. ಕೇವಲ 24 ಗಂಟೆಗಳಲ್ಲಿ ಎಲ್ಲವೂ ಬದಲಾಗಿ ಹೋಯಿತು.