ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕಿಚ್ಚ ಸುದೀಪ್ ತಾಯಿ ಸರೋಜ ನಿಧನರಾಗಿದ್ದಾರೆ. ತಾಯಿಯ ಅಗಲಿಕೆಯ ನೋವಿನಲ್ಲಿರುವ ಸುದೀಪ್ ಸುದೀರ್ಘವಾದ ಟ್ವೀಟ್ ಒಂದನ್ನು ಮಾಡಿದ್ದಾರೆ.
ಸುದೀಪ್ ಅವರ ತಾಯಿ ಸರೋಜ ಅವರು ಅಕ್ಟೋಬರ್ 21ರಂದು ನಿಧನರಾಗಿದ್ದು ನಟ ಮಾತೃ ವಿಯೋಗದ ನೋವಿನಲ್ಲಿದ್ದಾರೆ. ಸದ್ಯ ಸುದೀಪ್ ಮಾಡಿರುವ ಟ್ವೀಟ್ ವೈರಲ್ ಆಗಿದೆ.
ಬಿಗ್ ಬಾಸ್ ಶೂಟಿಂಗ್ಗೆ ಹೊರಡುವಾಗ ಅವರನ್ನು ಗಟ್ಟಿಯಾಗಿ ಹಗ್ ಮಾಡಿ ಬಂದಿದ್ದೆ, ಎಲ್ಲ ಬದಲಾಯಿತು ಎನ್ನುವ ಅರ್ಥದಲ್ಲಿ ಟ್ವೀಟ್ ಮಾಡಿದ್ದಾರೆ. ನಟ ಘಟನೆಯನ್ನು ಸುದೀಪ್ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
ನನ್ನ ಅಮ್ಮ ನಾನು ಶೂಟ್ಗೆ ಹೊರಡುವ ಮುನ್ನ ನನ್ನನ್ನು ಗಟ್ಟಿಯಾಗಿ ಅಪ್ಪಿಕೊಂಡಿದ್ದರು. ನಂತರದ ಕೆಲವೇ ಗಂಟೆಗಳಲ್ಲಿ ಅವರು ಇಲ್ಲವಾದರು. ಆದರೆ ಇದನ್ನು ಒಪ್ಪಿಕೊಳ್ಳಲು ಆಗುತ್ತಿಲ್ಲ. ಇದನ್ನು ಒಪ್ಪಿಕೊಳ್ಳಲು ಮತ್ತಷ್ಟು ಕಾಲಾವಕಾಶ ಬೇಕು ಎಂದಿದ್ದಾರೆ.
ನಮ್ಮ ಅಮ್ಮ ನನ್ನ ಮೊದಲ ಅಭಿಮಾನಿ ಆಗಿದ್ದರು. ಅಭಿಮಾನವನ್ನು ನಿತ್ಯವೂ ವ್ಯಕ್ತಪಡಿಸುತ್ತಿದ್ದರು. ತಪ್ಪು ಮಾಡಿದರೆ, ತಿದ್ದುವ ಗುರುವಾಗಿದ್ದರು. ಸದಾ ನನ್ನ ಹಿತವನ್ನೇ ಬಯಸುತ್ತಿದ್ದರು ಎಂದು ಕಿಚ್ಚ ಅವರು ಅಮ್ಮನ ಕುರಿತು ಬರೆದುಕೊಂಡಿದ್ದಾರೆ.
ನಮ್ಮಮ್ಮ ನನ್ನ ಜೀವನದ ಅಮೂಲ್ಯ ವ್ಯಕ್ತಿ ಆಗಿದ್ದಾರೆ. ಅಮ್ಮ ನನ್ನ ಜೀವನದ ಸಂಭ್ರಮವೇ ಆಗಿದ್ದರು. ಅಮ್ಮ ನನ್ನ ಜೀವನದ ಕ್ರಿಟಿಕ್ ಆಗಿದ್ದರು. ಎಲ್ಲವೂ ಆಗಿದ್ದ ಅಮ್ಮನ ಕಳೆದು ಕೊಂಡ ನೋವು ಅಷ್ಟಿಷ್ಟಲ್ಲ. ಅದು ಸದಾ ಇರುತ್ತವೆ ಎಂದು ನಟ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
ಅಮ್ಮ ನನ್ನ ಜೀವನದಲ್ಲಿ ಎಲ್ಲವೂ ಆಗಿದ್ದಳು. ಪ್ರತಿ ದಿನ ನನ್ನ ಫೋನ್ಗೆ ಒಂದು ಸಂದೇಶ ಬರ್ತಾ ಇತ್ತು ಗುಡ್ ಮಾರ್ನಿಂಗ್ ಕಂದ ಅನ್ನೋ ಸಂದೇಶ ಅದಾಗಿತ್ತಿತ್ತು. ಆದರೆ, ಅಕ್ಟೋಬರ್ 18 ರಂದೇ ಒಂದು ಒಂದು ಸಂದೇಶ ಬಂತು. ಅದೇ ಕೊನೆ ನೋಡಿ. ಅಮ್ಮನ ಸಂದೇಶ ಇನ್ಮುಂದೆ ಬರೋದೇ ಇಲ್ಲ ಎಂದು ಕಿಚ್ಚ ಬರೆದುಕೊಂಡಿದ್ದಾರೆ.
ಅಮ್ಮನ ಎಂದೂ ಆ ಒಂದು ಸ್ಥಿತಿಯಲ್ಲಿ ನೋಡಿಯೇ ಇಲ್ಲ. ಆದರೆ, ಈಗೀನ ಸ್ಥಿತಿ ನನಗೆ ನಿಜಕ್ಕೂ ಹೊಸದೇ ಆಗಿದೆ. ಇದನ್ನ ಅರ್ಥ ಮಾಡಿಕೊಳ್ಳಲು ಮನಸು ಕಷ್ಟಪಡುತ್ತಿದೆ. ಅಮ್ಮನ ನನ್ನ ಜೀವನದಲ್ಲಿ ಒಂದು ಅಮೂಲ್ಯ ರತ್ನವೇ ಆಗಿದ್ದಳು. ಈಕೆ ಇಲ್ಲದೇ ಜೀವನ ಹೇಗೆ ಅನ್ನೋ ಸಣ್ಣ ನೋವು ಕಾಡುತ್ತಿದೆ ಎಂದಿದ್ದಾರೆ.
ಅಮ್ಮನ ಬಗ್ಗೆ ಹೇಳೋಕೆ ಸಾಕಷ್ಟು ವಿಷಯ ಇದೆ. ಅಮ್ಮ ನನ್ನ ಜೀವನದ ಮೊಟ್ಟ ಮೊದಲ ಅಭಿಮಾನಿ ಆಗಿದ್ದಳು. ಅಮ್ಮ ಇಲ್ಲದೇ ಏನೂ ಇಲ್ಲ ಅನ್ನೋ ನೋವು ಈಗ ಮನಸನ್ನ ಇದೀಗ ಹೆಚ್ಚು ಹೆಚ್ಚು ಆವರಿಸಿಕೊಳ್ಳುತ್ತಿದೆ ಎಂದಿದ್ದಾರೆ.