ಯಲಹಂಕ:-ಬೆಂಗಳೂರು ನಗರದ ಯಲಹಂಕ ಸುತ್ತಾಮುತ್ತಾ ಭಾರಿ ಮಳೆ ಆಗುತ್ತಿದ್ದು, ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ಯಲಹಂಕ ತಗ್ಗುಪ್ರದೇಶ ಜಲಾವೃತ ಆಗಿದೆ.
ಯಲಹಂಕ ಕೆರೆಕೋಡಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜಲದಿಗ್ಭಂಧನ ಆಗಿದ್ದು, ಯಲಹಂಕ ರೈತರ ಸಂತೆ ಸುತ್ತಮುತ್ತಲ ಪ್ರದೇಶಗಳಿಗೆ ನೀರು ನುಗ್ಗಿ ತೊಂದರೆ ಅನುಭವಿಸುವಂತಾಗಿದೆ.
ಮುಖ್ಯವಾಗಿ ಜಕ್ಕೂರು ರಸ್ತೆ ಕೆರೆಯಂತಾಗಿ ಪ್ರಯಾಣಿಕರು ಪರದಾಟ ನಡೆಸಿದ್ದಾರೆ.
ಬೈಕ್, ಕಾರು, ಟ್ಯಾಕ್ಸಿ ಕೆಟ್ಟು ನಿಂತು ಸಮಸ್ಯೆ ಎದುರಿಸುವಂತಾಗಿದೆ. ಕೆಟ್ಟುನಿಂತ ಬೈಕ್ಗಳನ್ನ ಕೆರೆಯಂತಾದ ರಸ್ತೆಯಲ್ಲೆ ವಾಹನ ಸವಾರರು ತಳ್ಳಿದ್ದಾರೆ. ಇನ್ನೂ ಭಾರಿ ಮಳೆಯಿಂದ ಸಂಭವಿಸಿದ ಅವಾಂತರದಿಂದ ಜನರ ಪರದಾಟ ಕೇಳುವವರಿಲ್ಲ ಎಂಬಂತಾಗಿದೆ.
ಒಂದು ಗಂಟೆಕಾಲ ಯಲಹಂಕ ಜಕ್ಕೂರು ರಸ್ತೆಯಲ್ಲೇ ನೀರು ನಿಂತಿದೆ. ಜೋರು ಮಳೆ ನೀರಿಂದ ರಾಜಕಾಲುವೆಯಲ್ಲಿ ಕಸ ತುಂಬಿಕೊಂಡು ಸಮಸ್ಯೆ ಎದುರಾಗಿದೆ. ಜಕ್ಕೂರು ರಸ್ತೆಯ ಸೆಂಚುರಿ ಅಪಾರ್ಟ್ಮೆಂಟ್ ಬಳಿ ರಾಜಕಾಲುವೆ ಉಕ್ಕಿಹರಿದು ತೀವ್ರ ಸಮಸ್ಯೆ ಎದುರಾಗಿದೆ.
ಯಲಹಂಕದ ಜಕ್ಕೂರು ರಸ್ತೆ ಸುರಭಿ ಲೇಔಟ್ ಗೆ ನೀರು ನುಗ್ಗಿ ತೊಂದರೆ ಆಗಿದೆ. ಸುರಭಿ ಬಡಾವಣೆ ಸರ್.ಎಂ.ವಿ ರಸ್ತೆಯ ತಗ್ಗು ಪ್ರದೇಶಗಳ ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿದೆಯ ಶುದ್ಧೀಕರಣ ಘಟಕ ರಸ್ತೆಯು ಸುಮಾರು ಅರ್ದ ಕಿ.ಮೀ ಜಲಾವೃತ ಆಗಿದೆ.
ಯಲಹಂಕ, ಯಲಹಂಕ ಉಪನಗರ ಸುತ್ತಾಮುತ್ತಾ ಭಾರಿ ಮಳೆ ಆಗುತ್ತಿರುವ ಹಿನ್ನೆಲೆ, ಪ್ರಯಾಣಿಕರು ಮತ್ತು ಜನರಿಗೆ ತೀವ್ರ ತೊಂದರೆ ಉಂಟಾಗಿದೆ.