ಹಾಸನ:- ಡಿಸಿಆರ್ಬಿ ಪೊಲೀಸರ ಕಾರ್ಯಚರಣೆ ನಡೆಸಿ ನಕಲಿ ಆಧಾರ್ ಕಾರ್ಡ್ ಹೊಂದಿದ್ದ ಮೂವರು ವಿದೇಶಿ ಪ್ರಜೆಗಳನ್ನು ಅರೆಸ್ಟ್ ಮಾಡಿದ್ದಾರೆ.
=
ಬಂಧಿತರನ್ನು ಜಮಾಲ್ ಅಲಿ, ಫಾರೂಕ್ ಅಲಿ, ಅಕ್ಮಲ್ ಹೊಕ್ಕು ಎಂದು ಗುರುತಿಸಲಾಗಿದೆ.
ಹಾಸನ ನಗರದ 80 ಅಡಿ ರಸ್ತೆಯ, ಗದ್ದೆಹಳ್ಳದ, ನಾಲ್ಕನೇ ಅಡ್ಡ ರಸ್ತೆಯ ಜುಬೇರ್ ಎಂಬವನ ಮನೆಯಲ್ಲಿ ಈ ಮೂವರು ವಾಸವಿದ್ದರು. ಜುಬೇರ್ ಮನೆಯ ಕಟ್ಟಡ ಕಾಮಗಾರಿ ಕೆಲಸ ಮಾಡುತ್ತಿದ್ದರು.
ಈ ಮೂವರು ಪಶ್ಚಿಮಬಂಗಾಳದ ವಿಳಾಸವಿರುವ ನಕಲಿ ಆಧಾರ್ಕಾರ್ಡ್ ಹೊಂದಿದ್ದರು. ನುಸುಳುಕೋರರನ್ನು ಡಿಸಿಆರ್ಬಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.