ಕಳೆದ ಕೆಲ ದಿನಗಳಿಂದ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಸಾಕಷ್ಟು ಜೀವ ಬೆದರಿಕೆ ಕರೆ ಬರುತ್ತಿದೆ. ಇದಕ್ಕೆಲ್ಲ ಕಾರಣ ಆಗಿರೋದು ಲಾರೆನ್ಸ್ ಬಿಷ್ಣೋಯ್. ಈತ ಸಲ್ಮಾನ್ ಖಾನ್ನ ಕೊಲೆ ಮಾಡೋದಾಗಿ ನಿರಂತರವಾಗಿ ಬೆದರಿಕೆ ಹಾಕುತ್ತಲೇ ಇದ್ದ. ಈ ಪ್ರಕರಣವನ್ನು ಸೆಟಲ್ಮೆಂಟ್ ಮಾಡಿಸೋದಾಗಿ ವ್ಯಕ್ತಿಯೋರ್ವ ಮುಂಬೈ ಟ್ರಾಫಿಕ್ ಪೊಲೀಸರಿಗೆ ಸಂದೇಶ ಕಳುಹಿಸಿದ್ದ. ಇದಕ್ಕಾಗಿ ಆತ 5 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದ. ಈಗ ಈ ವ್ಯಕ್ತಿ ಕ್ಷಮೆ ಕೇಳಿದ್ದಾನೆ. ‘ಮಿಸ್ ಆಗಿ ಮೆಸೇಜ್ ಹೋಯ್ತು’ ಎಂದಿದ್ದಾನೆ.
‘ಸಲ್ಮಾನ್ ಖಾನ್ ಹತ್ಯೆ ಬಾಬಾ ಸಿದ್ಧಿಕಿ ಹತ್ಯೆಗಿಂತಲೂ ಭೀಕರವಾಗಿರುತ್ತದೆ’ ಎನ್ನುವ ಸಂದೇಶ ಬಂದಿತ್ತು. ಇದನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನವರೇ ಮಾಡಿರಬಹುದು ಎಂದು ಊಹಿಸಲಾಗಿತ್ತು. ಇದಾದ ಬಳಿಕ ಪ್ರಕರಣ ಸೆಟಲ್ ಮಾಡಲು ಐದು ಕೋಟಿ ರೂಪಾಯಿ ಕೇಳಿದ್ದ. ಈಗ ಇದೇ ವ್ಯಕ್ತಿ ಕ್ಷಮೆ ಕೇಳಿದ್ದಾನೆ.
‘ನನ್ನ ಸಂದೇಶ ಮಿಸ್ ಆಗಿ ಹೋಗಿದೆ. ಈ ಘಟನೆ ಬಗ್ಗೆ ಕ್ಷಮೆ ಕೇಳುತ್ತೇನೆ’ ಎಂದು ಆತ ಈಗ ಸಂದೇಶ ಕಳುಹಿಸಿದ್ದಾನೆ. ಇದಾದ ಬಳಿಕವೂ ಪೊಲೀಸರು ಪ್ರಕರಣವನ್ನು ಹಗುರವಾಗಿ ಸ್ವೀಕರಿಸಿಲ್ಲ. ಅವರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಈ ಸಂದೇಶ ಬಂದಿದ್ದು ಜಾರ್ಖಂಡದಿಂದ ಎನ್ನಲಾಗಿದೆ. ಆ ವ್ಯಕ್ತಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಆತ ಕ್ಷಮೆ ಕೇಳಿದ ಹೊರತಾಗಿಯೂ ಆತನ ಬಂಧನಕ್ಕೆ ಹುಡುಕಾಟ ನಡೆದಿದೆ.
ಸಲ್ಮಾನ್ ಖಾನ್ಗೆ ಈ ರೀತಿ ಬೆದರಿಕೆ ಬಂದಿರೋದು ಇದೇ ಮೊದಲೇನು ಅಲ್ಲ. ಇದಕ್ಕೆ ಸಂಬಂಧಿಸಿದ ಅನೇಕ ಘಟನೆಗಳು ನಡೆದಿವೆ. ಅದರಲ್ಲೂ ಬಿಷ್ಣೋಯ್ ಗ್ಯಾಂಗ್ನವರು ಪದೇ ಪದೇ ಟಾರ್ಗೆಟ್ ಮಾಡುತ್ತಿದ್ದಾರೆ. ಆತ ಜೈಲಿನಲ್ಲಿ ಇದ್ದುಕೊಂಡೇ ಎಲ್ಲವನ್ನೂ ಹ್ಯಾಂಡಲ್ ಮಾಡುತ್ತಿದ್ದಾನೆ. ಇದನ್ನೇ ಬಂಡವಾಳ ಮಾಡಿಕೊಂಡವರು ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ.