ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಗೆ ಬೆನ್ನು ನೋವಿನ ಸಮಸ್ಯೆ ಉಲ್ಬಣಗೊಂಡಿದೆ. ಇದರಿಂದ ಬೆಂಗಳೂರಿನಲ್ಲಿ ಟ್ರೀಟ್ ಮೆಂಟ್ ತೆಗೆದುಕೊಳ್ಳಲು ನಟ ಸಾಕಷ್ಟು ಪ್ರಯತ್ನಿಸಿದ್ದರು. ಆದರೆ ಅದು ಸಾಧ್ಯವಾಗದ ಕಾರಣಕ್ಕೆ ಬಳ್ಳಾರಿಯಲ್ಲೇ ಟ್ರೀಟ್ ಮೆಂಟ್ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಈ ಸಂಬಂಧ ಹೈಕೋರ್ಟ್ ವೈದ್ಯಕೀಯ ವರದಿ ಕೇಳಿದ ಬೆನ್ನಲ್ಲೇ ವಿಮ್ಸ್ನಲ್ಲಿ ದಾಸನಿಗೆ ಸ್ಕ್ಯಾನಿಂಗ್ ಮಾಡಲಾಗಿದೆ.
ಬಳ್ಳಾರಿ ಜೈಲಿನಲ್ಲಿ ಬೆನ್ನು ನೋವಿನಿಂದ ದರ್ಶನ್ ಪರದಾಡುತ್ತಿದ್ದಾರೆ ಎನ್ನಲಾಗಿದೆ. ಇಷ್ಟಿದ್ರೂ ಬಳ್ಳಾರಿಯಲ್ಲಿ ಸ್ಕ್ಯಾನಿಂಗ್ ಬೇಡ, ನಾನು ಬೆಂಗಳೂರಲ್ಲೇ ವೈದ್ಯರನ್ನು ಭೇಟಿ ಮಾಡುತ್ತೇನೆ ಎಂದು ದರ್ಶನ್ ಹೇಳುತ್ತಿದ್ದರು. ಆದ್ರೆ ಬೆನ್ನು ನೋವು ಹೆಚ್ಚಾದ ಕಾರಣಕ್ಕೆ ಚಿಕಿತ್ಸೆ ಅತ್ಯಗತ್ಯ ಅನ್ನೋದು ಅರಿವಾಗಿದೆ. ಹೈಕೋರ್ಟ್ ಕೂಡ ಮೆಡಿಕಲ್ ರಿಪೋರ್ಟ್ ಕೇಳಿರೋದ್ರಿಂದ ಬಳ್ಳಾರಿಯಲ್ಲಿ ದರ್ಶನ್ ಚಿಕಿತ್ಸೆ ಆರಂಭವಾಗಿದೆ.
ಮಂಗಳವಾರ ರಾತ್ರಿ 9.10ಕ್ಕೆ ಆ್ಯಂಬುಲೆನ್ಸ್ನಲ್ಲಿ ದರ್ಶನ್ನ ಜೈಲಿನಿಂದ ವಿಮ್ಸ್ಗೆ ಕರದೊಯ್ಯಲಾಯ್ತು. ದರ್ಶನ್ ಆಸ್ಪತ್ರೆ ಬಳಿ ಬರ್ತಿದಂತೆ ಅಭಿಮಾನಿಗಳು ಶಿಳ್ಳೆ ಹೊಡೆದು ಹರ್ಷೋದ್ಘಾರ ಕೂಗಿದರು. ಪೊಲೀಸ್ ಭದ್ರತೆಯಲ್ಲಿ ವಿಮ್ಸ್ನಲ್ಲಿ ದರ್ಶನ್ ಗೆ ಸ್ಕ್ಯಾನಿಂಗ್ ಮಾಡಲಾಯ್ತು. ರಾತ್ರಿ 10.10ರವರೆಗೂ ಸ್ಕ್ಯಾನಿಂಗ್ ಮಾಡಲಾಯ್ತು.
ಪ್ರಾಥಮಿಕ ಮಾಹಿತಿ ಪ್ರಕಾರ ದರ್ಶನ್ ಬ್ಯಾಕ್ ಬೋನ್ 15 ಪರ್ಸೆಂಟ್ನಷ್ಟು ಇರುವ ಜಾಗ ಬಿಟ್ಟು ಪಕ್ಕಕ್ಕೆ ಸರೆದಿದೆ. ಹೀಗಾಗಿ ಅದನ್ನ ಫಿಜಿಯೋಥೆರಪಿ ಮೂಲಕ ಸರಿಮಾಡಲು ಸಾಧ್ಯವಿಲ್ಲ. ಹೀಗಾಗಿ ಸ್ಕಾನಿಂಗ್ ಹಾಗೂ ಸರ್ಜರಿ ಅಗತ್ಯ ಇದೆ ಅಂತಾ ವೈದ್ಯರು ಮೌಖಿಕವಾಗಿ ತಿಳಿಸಿದ್ದರು ಎನ್ನಲಾಗಿದೆ. ಸದ್ಯ ಈ ಸ್ಕ್ಯಾನಿಂಗ್ ರಿಪೋರ್ಟ್ಗಾಗಿ ವೈದ್ಯರು ಕಾಯ್ತಿದ್ದಾರೆ. ಈ ರಿಪೋರ್ಟ್ನಲ್ಲಿ ಸರ್ಜರಿ ಅಗತ್ಯ ಅನ್ನೊದು ಗೊತ್ತಾದ್ರೆ ಬಳ್ಳಾರಿ ಆಸ್ಪತ್ರೆಯಲ್ಲಿ ಅಷ್ಟೊಂದು ಸೌಲಭ್ಯಗಳಿಲ್ಲ. ಹೀಗಾಗಿ ಬೆಂಗಳೂರಿಗೆ ಶಿಪ್ಟ್ ಮಾಡಿಸಿ ಅಂತಾ ದರ್ಶನ್ ಕುಟುಂಬಸ್ಥರು ಕೋರ್ಟ್ನಲ್ಲಿ ಮನವಿ ಮಾಡೋಕೆ ಮುಂದಾಗಲಿದ್ದಾರೆ.
ದರ್ಶನ್ ಆಸ್ಪತ್ರೆಯಿಂದ ಹೊರಡುವ ವೇಳೆ ಪೊಲೀಸರ ಮಧ್ಯೆ ತೂರಿ ಬಂದ ಅಭಿಮಾನಿಯೊಬ್ಬ ದರ್ಶನ್ ಕೈ ಹಿಡಿದು ಎಳೆದಿದ್ದಾನೆ. ಈ ವೇಳೆ ಫ್ಯಾನ್ ಮೇಲೆಯೇ ಒಂದು ಕ್ಷಣ ದರ್ಶನ್ ಗರಂ ಆದ ದೃಶ್ಯ ಕಂಡು ಬಂತು. ಅಂತಿಮವಾಗಿ ಆಸ್ಪತ್ರೆಯಿಂದ ನೇರ ಜೈಲಿಗೆ ಬಂದ ದರ್ಶನ್ ಬೆನ್ನನ್ನ ಹಿಡಿದುಕೊಂಡೇ ತಮ್ಮ ಸೆಲ್ ಸೇರಿಕೊಂಡರು.