ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ ರೋಚಕ ತಿರುವು ಪಡೆದುಕೊಂಡಿದೆ. ಈ ಬಗ್ಗೆ ಕೆಲವು ದಿನಗಳ ಹಿಂದೆ ಸ್ನೇಹಾ ಅಲಿಯಾಸ್ ಸಂಜನಾ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದರು. ಅಂತೆಯೇ ಇದೀಗ ಎಪಿಸೋಡ್ ನೋಡಿದ್ರೆ ಅವರ ಪಾತ್ರ ಅಂತ್ಯವಾಗುತ್ತಾ ಅನ್ನೋ ಅನುಮಾನ ಶುರುವಾಗಿದೆ.
ಕೆಲವೊಂದು ಗುಡ್ ಬೈ ಹೇಳೋದು ತುಂಬ ಕಷ್ಟ. ಆದರೆ ಬೆಳವಣಿಗೆಗೆ ಅದು ತುಂಬಾ ಮುಖ್ಯ ಎಂದು ಸಂಜನಾ ಬರೆದುಕೊಂಡಿದ್ದರು. ಆಕೆ ಬರೆದುಕೊಂಡಿದ್ದಕ್ಕೆ ಪೂರಕ ಎಂಬಂತೆ ಸದ್ಯ ಪುಟ್ಟಕ್ಕನ ಮಕ್ಕಳ ಧಾರವಾಹಿಯ ಹೊಸ ಪ್ರೋಮೋ ಔಟ್ ಆಗಿದೆ.
ಅತ್ತೆ ಪಾಲಿಗೆ ಸೊಸೆ ಸ್ನೇಹಾನೇ ಕಾವಲಾಗಿದ್ದಾಳೆ. ಬಂಗಾರಮ್ಮನಿಗೆ ತೋಡಿದ ಖೆಡ್ಡಾದಲ್ಲಿ ತಾನೇ ಉರುಳಿ ಬೀಳುವಂತಿದೆ ಸಿಂಗಾರಮ್ಮ. ಅತ್ತೆಯನ್ನು ಕಾಪಾಡಬೇಕು ಅಂತಿದ್ದ ಸ್ನೇಹಾಗೆ ಸಿಂಗಾರಮ್ಮ ಆಕ್ಸಿಡೆಂಟ್ ಮಾಡಿಸಬೇಕು ಎಂದು ಪ್ಲ್ಯಾನ್ ಮಾಡ್ತಾಳೆ. ಆದರೆ ಈ ಮಾತನ್ನು ಆಣೆ ಚೌಡವ್ವ ಕದ್ದು ಕೇಳಿಸಿಕೊಳ್ತಾಳೆ. ಆದರೆ ಈಗ ಹೊಸ ಪ್ರೋಮೋ ನೋಡಿದರೆ, ಸ್ನೇಹಾ ಹಾಗೂ ಬಂಗಾರಮ್ಮ ಬರುತ್ತಿದ್ದ ಕಾರು ಆಕ್ಸಿಡೆಂಟ್ ಆಗಿದೆ.
ಭೀಕರ ಅಪಘಾತದಲ್ಲಿ ಸ್ನೇಹಾ ಪಾತ್ರ ಅಂತ್ಯವಾಗುತ್ತೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಸ್ನೇಹನ ಸಾಯಿಸಿ ಹೊಸ ಹುಡ್ಗಿ ಜೊತೆ ಕಂಠೀಗೆ ಮದ್ವೆ ಮಾಡೋ ಪ್ಲಾನ್ ಮಾಡಿದ್ದಾರೆ ಡೈರೆಕ್ಟರ್ ಎಂದು ಕಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಸ್ನೇಹಾಗೆ ಪ್ಲ್ಯಾಸ್ಟಿಕ್ ಸರ್ಜರಿ ಆಗಬಹುದು ಎಂದು ಕಮೆಂಟ್ ಮಾಡುತ್ತಿದ್ದಾರೆ.
ಇಷ್ಟೂ ದಿನ ಸಹನಾ ಬದುಕಿಲ್ಲ ಅಂದುಕೊಂಡಿದ್ದ ಸ್ನೇಹಾಗೆ ಅಕ್ಕ ಬದುಕಿರುವ ಸತ್ಯವೂ ಗೊತ್ತಾಗಿದೆ. ಸಂಜನಾ ಅವರು ಧಾರಾವಾಹಿ ಜೊತೆಗೆ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಫೋಟೋಶೂಟ್ ಮಾಡಿಸಿಕೊಂಡಿರುವ ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಕೇವಲ ಧಾರಾವಾಹಿ ಅಲ್ಲದೇ ರೀಲ್ಸ್ ಮೂಲಕವೂ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.