ಇರಾಕ್ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳ ಸಂಘಟನೆಯ ಕಮಾಂಡರ್ ಸೇರಿ ಎಂಟು ಅಧಿಕಾರಿಗಳನ್ನು ಹತ್ಯೆ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ದೇಶದ ಹಮ್ರಿನ್ ಶಿಖರ ಪ್ರಾಂತ್ಯದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಜಾಸ್ಸಿಂ ಅಲ್ ಮಜ್ರೂಯಿ ಅಬು ಅಬ್ದುಲ್ ಖಾದೆರ್ ಹತನಾಗಿದ್ದಾರೆ ಎಂದು ಪ್ರಧಾನಿ ಶಿಯಾ ಅಲ್ ಸುದಾನಿ ತಿಳಿಸಿದರು.
‘ಇರಾಕ್ನಲ್ಲಿ ಉಗ್ರಗಾಮಿಗಳಿಗೆ ಅವಕಾಶವಿಲ್ಲ. ಅವರ ಅಡಗುತಾಣಗಳಿಗೇ ನುಗ್ಗಿ, ನಿರ್ಮೂಲನೆ ಮಾಡುತ್ತೇವೆ’ ಎಂದು ಸುದಾನಿ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.
ಜಂಟಿ ಕಾರ್ಯಾಚರಣೆ ತಂಡದ ಕಮಾಂಡ್ ಈ ಕುರಿತ ಹೇಳಿಕೆಯಲ್ಲಿ, ಗುಪ್ತದಳದ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಲಾಯಿತು. ದಾಳಿಯಲ್ಲಿ ಹತರಾದ ಇತರೆ ಅಧಿಕಾರಿಗಳ ವಿವರಗಳನ್ನು ಡಿಎನ್ಎ ಪರೀಕ್ಷೆಯ ಬಳಿಕ ಪ್ರಕಟಿಸಲಾಗುವುದು ಎಂದು ಪ್ರಧಾನಿ ಮಾಹಿತಿ ನೀಡಿದ್ದಾರೆ.