ಹಿಜ್ಬುಲ್ಲಾ ಸಂಘಟನೆಯ ಪ್ರಮುಖ ನಾಯಕ ಮತ್ತು ಸಂಘಟನೆಯ ಮುಖ್ಯಸ್ಥ ಹಸನ್ ನಸ್ರಲ್ಲಾ ಅವರ ಉತ್ತರಾಧಿಕಾರಿ ಹಾಶೆಮ್ ಸಫಿಯುದ್ದೀನ್ ಬೈರುತ್ ವೈಮಾನಿಕ ದಾಳಿಯಲ್ಲಿ ನಿಧನರಾಗಿದ್ದಾರೆ ಎಂದು ಇಸ್ರೇಲ್ ಅಧಿಕಾರಿಗಳು ದೃಢಪಡಿಸಿದೆ.
ಮೂರು ವಾರಗಳ ಹಿಂದೆ ಬೈರುತ್ ನ ದಕ್ಷಿಣ ಉಪನಗರಗಳಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಸಫಿಯುದ್ದೀನ್ ನನ್ನು ಹತ್ಯೆ ಮಾಡಲಾಗಿದೆ. ಸಫಿಯುದ್ದೀನ್ ನನ್ನು ನಿರ್ಮೂಲನೆ ಮಾಡುವ ಸಾಧ್ಯತೆಯಿದೆ ಎಂದು ಇಸ್ರೇಲ್ ಈ ಹಿಂದೆ ತಿಳಿಸಿತ್ತು. ಆದರೆ ಸಫಿಯುದ್ದೀನ್ ಹತ್ಯೆಯನ್ನು ಹಿಜ್ಬುಲ್ಲಾ ಇನ್ನೂ ದೃಡಪಡಿಸಿಲ್ಲ.
ಇಸ್ರೇಲ್ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಹರ್ಜಿ ಹಲೇವಿ ಅವರು ಹಿಜ್ಬುಲ್ಲಾ ನಾಯಕತ್ವವನ್ನು ಗುರಿಯಾಗಿಸುವ ದೇಶದ ಬದ್ಧತೆಯನ್ನು ಒತ್ತಿಹೇಳಿದ್ದಾರೆ. “ನಾವು ಅವರ ಬದಲಿಯಾದ ನಸ್ರಲ್ಲಾ ಮತ್ತು ಹಿಜ್ಬುಲ್ಲಾದ ಹೆಚ್ಚಿನ ಹಿರಿಯ ನಾಯಕತ್ವವನ್ನು ತಲುಪಿದ್ದೇವೆ. ಇಸ್ರೇಲ್ನ ನಾಗರಿಕರ ಸುರಕ್ಷತೆಗೆ ಬೆದರಿಕೆ ಹಾಕುವ ಯಾರನ್ನಾದರೂ ನಾವು ತಲುಪುತ್ತೇವೆ” ಎಂದು ಅವರು ಹೇಳಿದರು.