ಅಕ್ರಮವಾಗಿ ತಿಮಿಂಗಲ ವಾಂತಿ (ಅಂಬರ್ಗ್ರೀಸ್) ಸಾಗಾಣಿಕೆ ಮಾಡುತ್ತಿದ್ದ ಆರೋಪಿಗಳ ಮೇಲೆ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ, 4 ಕೆಜಿ 386 ಗ್ರಾಂ ತೂಕದ ತಿಮಿಂಗಿಲ ವಾಂತಿ (ಅಂಬರ್ ಗ್ರೀಸ್) ಜಪ್ತಿ ಪಡಿಸಿಕೊಳ್ಳಲಾಗಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಮಾರ್ಗವಾಗಿ ಬೆಂಗಳೂರಿಂದ ತಮಿಳುನಾಡಿಗೆ ಅಕ್ರಮವಾಗಿ ತಿಮ್ಮಿಂಗಲ ವಾಂತಿ (ಅಂಬರ್ ಗ್ರೀಸ್) ನ್ನು ಸಾಗಾಣಿಕೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಕೊಳ್ಳೇಗಾಲ ಪಟ್ಟಣದ ಬಳಿ ತಪಾಸಣೆ ಮಾಡಿದ ಪೊಲೀಸರು ಆರೋಪಿಗಳನ್ನು ಮಾಲು ಸಹಿತ ಬಂಧಿಸಿದ್ದಾರೆ.
ಕೆ.ಎ. 41 ಸಿ 9153 ರ ಸ್ವಿಪ್ಟ್ ಕಾರ್ ನಲ್ಲಿ ಮೈಸೂರಿನ ಅಶೋಕಪುರದ ವಸಂತಕುಮಾರ್ ಬಿನ್ ಲೇಟ್ ಕೃಷ್ಣಪ್ಪ, ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಆರೂರು ಗ್ರಾಮದ ವೈರಮುಡಿ ಎಂಬ ಆರೋಪಿಗಳು 4 ಕೆಜಿ 386 ಗ್ರಾಂ ತೂಕದ ತಿಮಿಂಗಿಲ ವಾಂತಿ (ಅಂಬರ್ ಗ್ರೀಸ್) ಸಾಗಿಸುತ್ತಿದ್ದನ್ನು ಪೊಲೀಸರು ಪತ್ತೆ ಹಚ್ಚಿದ್ದು, ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ