ಪಾಕಿಸ್ತಾನ ಸೇರಿದಂತೆ ಕೆಲವೊಂದು ಮುಸ್ಲಿಂ ರಾಷ್ಟ್ರಗಳಲ್ಲಿ ಮಹಿಳೆಯರಿಗೆ ಸಾಕಷ್ಟು ನಿರ್ಬಂಧನ ಹೇರಲಾಗಿದೆ. ಮಹಿಳೆಯರು ಧರಿಸುವ ವಸ್ತ್ರಗಳಲ್ಲಿ ಸಾಕಷ್ಟು ಕಟ್ಟುಪಾಡುಗಳಿವೆ. ಈ ಎಲ್ಲಾ ಕಟ್ಟು ಪಾಡುಗಳ ನಡುವೆಯೂ ಪಾಕಿಸ್ತಾನದ ಮಾಡಲ್ ಒಬ್ಬರು ಬಿಕಿನಿ ತೊಟ್ಟು ಮಿಸ್ ವರ್ಲ್ಡ್ ಸ್ಪರ್ಧೆಯ ವೇದಿಕೆ ಮೇಲೆ ಹೆಜ್ಜೆ ಹಾಕುವ ಮೂಲಕ ಪ್ರತಿಯೊಬ್ಬರು ಹುಬ್ಬೇರುವಂತೆ ಮಾಡಿದ್ದಾರೆ.
ಹೌದು ಪಾಕಿಸ್ತಾನದ ಖ್ಯಾತ ಮಾಡಲ್ ರೋಮಾ ಮೈಕೆಲ್ ಮಿಸ್ ವರ್ಲ್ಡ್ ಗ್ರ್ಯಾಂಡ್ ಸೌಂದರ್ಯ ಸ್ಪರ್ಧೆಯಲ್ಲಿ ಬಿಕಿನಿ ತೊಟ್ಟು ರ್ಯಾಂಪ್ ವಾಕ್ ಮಾಡಿದ್ದಾರೆ. ಈ ವಿಡಿಯೋ ಸದ್ಯ ಸಖತ್ ಚರ್ಚೆಗೆ ಕಾರಣವಾಗಿದ್ದು ಮುಸ್ಲಿಂ ರಾಷ್ಟ್ರಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ರೋಮಾ ಮೈಕೆಲ್ ಅವರು ಪಾಕಿಸ್ತಾನಿ ಕ್ರಿಶ್ಚಿಯನ್ ಎಂದೂ ಹೇಳಲಾಗುತ್ತಿದೆ.
ಮೊದಲಿಗೆ ರೋಮಾ ಮೈಕೆಲ್ ಅವರು ತಮ್ಮ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದರು. ಆದರೆ ಪಾಕಿಸ್ತಾನದ ಜನರು ಪಾಕಿಸ್ತಾನದ ಹೆಸರನ್ನು ಹಾಳು ಮಾಡಿದ್ದೀಯ ಎಂದು ಈಕೆಗೆ ಬೆದರಿಕೆ ಹಾಕಿ, ಮನಬಂದಂತೆ ನಿಂದಿಸುತ್ತಿರುವುದರಿಂದ ಆ ವಿಡಿಯೋ ಡಿಲೀಟ್ ಮಾಡಿದ್ದಾರೆ ಎನ್ನಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಹೆಚ್ಚು ವೀಕ್ಷಣೆ ಪಡೆಯುತ್ತಿದೆ. ಇನ್ನು ಕಟ್ಟುಪಾಡುಗಳನ್ನು ಸೈಡಿಗಿಟ್ಟ ರೋಮಾ ಮೈಕೆಲ್ ನಡೆಗೆ ಹಲವರು ಬೇಷ್ ಎಂದಿದ್ದಾರೆ. ಆದರೆ ಪಾಕಿಸ್ತಾನದ ಪ್ರತಿಯೊಬ್ಬರು ಈಕೆಯ ವಿರುದ್ಧ ಗರಂ ಆಗಿದ್ದಾರೆ.
ಮೊದಲ ಬಾರಿಗೆ ಲಾಹೋರ್ ಮೂಲದ ಮಾಡೆಲ್ ರೋಮಾ ಮೈಕೆಲ್ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಆಧುನೀಕರಣಗೊಂಡ ಪಾಕಿಸ್ತಾನಕ್ಕಾಗಿ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಧನ್ಯವಾದಗಳು ಎಂದು ವಿಡಿಯೋ ಟ್ಯಾಗ್ ಮಾಡಿದ್ದಾರೆ.
ಮಾಡೆಲ್ ರೋಮಾ ಅವರು ಪಾಕಿಸ್ತಾನದ ಲಾಹೋರ್ನಿಂದ ಏಷ್ಯಾದ ಪ್ರಸ್ತುತ ಶೋ ಸ್ಟಾಪರ್ ಆಗಿದ್ದಾರೆ. ಇವರು ಶರಿಯಾ ಜಗತ್ತನ್ನು ಬೆರಗುಗೊಳಿಸಿದ್ದಾರೆ. ರೋಮಾ ಮೈಕೆಲ್ನನ್ನು ಇತರ ಪಾಕಿಸ್ತಾನಿ ಮಾಡೆಲ್ಗಳು ಹಾಗೂ ಇನ್ಫ್ಲುಯೆನ್ಸರ್ಗಳಂತೆ ಇಸ್ಲಾಂನ ಹೆಸರಿನಲ್ಲಿ ಹತ್ಯೆ ಮಾಡಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಹಲವರು ಈಕೆಯ ಬಗ್ಗೆ ಕಳವಳ ಕೂಡ ವ್ಯಕ್ತಪಡಿಸಿದ್ದಾರೆ.
ರೋಮಾ ಮೈಕೆಲ್ ಕ್ರಿಶ್ಚಿಯನ್ ಮಾಡೆಲ್, ಮುಸ್ಲಿಂ ಅಲ್ಲ. ಆದರೆ ಇನ್ನೂ ಸಂಪ್ರದಾಯವಾದಿ ಇಸ್ಲಾಮಿಕ್ ದೇಶವನ್ನು ಪ್ರತಿನಿಧಿಸುವುದು ಅವರ ಅಸ್ತಿತ್ವಕ್ಕೆ ಅವಮಾನವಾಗಿದೆ. ಅವರು ತಮ್ಮ ಪಾಸ್ಪೋರ್ಟ್ಗಳ ಅಡಿಯಲ್ಲಿ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನ್ ಎಂಬ ಟ್ಯಾಗ್ ಅನ್ನು ತೆಗೆದುಹಾಕಬೇಕು ಎಂದು ಕೆಲವರು ಸಲಹೆ ನೀಡಿದ್ದಾರೆ.