7ಓ ಕ್ಲಾಕ್ ಕನ್ನಡ ಸಿನಿಮಾದ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟ ನಟಿ ನಿತ್ಯಾ ಮೆನನ್ ಆ ಬಳಿಕ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕನ್ನಡದ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು ನಿತ್ಯಾ ಮೆನನ್ ಗೆ ಪರಭಾಷೆಯಲ್ಲಿ ಸಖತ್ ಡಿಮ್ಯಾಂಡ್ ಇದೆ. ಕನ್ನಡ,ತಮಿಳು, ತೆಲುಗು, ಮಲಯಾಳಂ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿರುವ ನಿತ್ಯಾ ಮೆನನ್ ಆರಂಭದಲ್ಲಿ ತಾವು ಎದುರಿಸಿದ ಟೀಕೆಗಳ ಬಗ್ಗೆ ಮಾತನಾಡಿದ್ದಾರೆ.
ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ನಿತ್ಯಾ ಮೆನನ್ ತಮ್ಮ ದೇಹದ ಅಂಗಾಂಗಗಳ ಬಗ್ಗೆ ತಾವು ಎದುರಿಸಿದ ಟೀಕೆಯ ಬಗ್ಗೆ ಮಾತನಾಡಿದ್ದಾರೆ.
ತೆಲುಗು ಸಿನಿಮಾವೊಂದರಲ್ಲಿ ನಿತ್ಯಾ ನಟಿಸುವಾಗ ಅವರ ಗುಂಗುರು ಕೂದಲನ್ನು ಯಾರು ಇಷ್ಟಪಡಲಿಲ್ಲವಂತೆ. ನಾನು ಫಸ್ಟ್ ಟೈಮ್ ಸೆಟ್ಗೆ ಬಂದಾಗ ಎಲ್ಲರೂ ವಿಚಿತ್ರವಾಗಿ ನೋಡುತ್ತಿದ್ದರು. ನಾಯಕಿ ಅಂದ್ಮೇಲೆ ದೇಹದ ತೂಕದ ಬಗ್ಗೆ ಮಾತನಾಡಿದರು. ಅದಕ್ಕೆಲ್ಲಾ ನಾನು ತಲೆ ಕೆಡಿಸಿಕೊಳ್ಳಲಿಲ್ಲ ಎಂದಿದ್ದಾರೆ.
ನಾನು ದಪ್ಪ ಮತ್ತು ಕುಳ್ಳಗೆ ಇದ್ದೇನೆ ಎಂದು ಎಲ್ಲರೂ ಅಪಹಾಸ್ಯ ಮಾಡಿದರು. ನನಗೆ ಗುಂಗುರು ಕೂದಲು ಮತ್ತು ದೊಡ್ಡ ಹುಬ್ಬು ಇದೆ ಎಂದು ಅನೇಕರು ಟೀಕೆ ಮಾಡಿದರು. ಯಾರನ್ನಾದರೂ ಅವರ ರೂಪದ ಆಧಾರದ ಮೇಲೆ ನೀವು ಹೇಗೆ ಟೀಕಿಸುತ್ತೀರಿ? ಎಂದಿದ್ದಾರೆ. ಅದು ಅವರ ಕೀಳು ಮಟ್ಟದ ಮನಸ್ಥಿತಿ ಎಂದು ಖಡಕ್ ಆಗಿ ನಿತ್ಯಾ ಮಾತನಾಡಿದ್ದಾರೆ. ಸವಾಲುಗಳನ್ನು ಎದುರಿಸಿ ಉತ್ತಮ ವ್ಯಕ್ತಿಯಾಗಲು ಪ್ರಯತ್ನಿಸಬೇಕು ಎಂದು ನಿತ್ಯಾ ಮೆನನ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.