ಪ್ರೀತಿಸಿ ಮದುವೆಯಾಗಿದ್ದ ನಟಿ ಸಮಂತಾ ರುತ್ ಪ್ರಭು ಹಾಗೂ ನಟ ನಾಗಚೈತನ್ಯ ಮದುವೆಯಾದ ಕೆಲ ವರ್ಷದಲ್ಲೇ ಡಿವೋರ್ಸ್ ಪಡೆದುಕೊಂಡಿದ್ದರು. 2021ರ 2021ರ ಅಕ್ಟೋಬರ್ ತಿಂಗಳಲ್ಲಿ ಸಮಂತಾ ಹಾಗೂ ನಾಗ ಚೈತನ್ಯ ವಿಚ್ಛೇದನ ಪಡೆಯೋ ನಿರ್ಧಾರವನ್ನು ಘೋಷಿಸಿದರು. ಇದು ಸಮಂತಾ ಜೀವನದ ಅತೀ ದುಃಖದ ಘಟನೆ. ಇದೇ ಸಂದರ್ಭದಲ್ಲಿ ಸಮಂತಾಗೆ ಪುಷ್ಪ ಸಿನಿಮಾದ ಐಟಂ ಸಾಂಗ್ನಲ್ಲಿ ನಟಿಸೋ ಅವಕಾಶ ಬಂತು. ಇದನ್ನು ಸಮಂತಾ ಒಪ್ಪಿಕೊಂಡು ನಟಿಸಿದರು. ಆದರೆ, ಇದನ್ನು ಮಾಡದಂತೆ ಕೆಲವರು ಸೂಚಿಸಿದ್ದಾಗ ಸಮಂತಾ ಹೇಳಿದ್ದಾರೆ.
‘ಪುಷ್ಪ ಚಿತ್ರದ ಐಟಂ ಸಾಂಗ್ ನಲ್ಲಿ ನಟಿಸಲು ಆಫರ್ ಬಂದಾಗ ನಾನು ವಿಚ್ಛೇದನ ಪ್ರಕ್ರಿಯೆಯಲ್ಲಿದ್ದೆ. ಈ ಹಾಡನ್ನು ಮಾಡದಂತೆ ಕುಟುಂಬದವರು, ಗೆಳೆಯರು ಸೂಚಿಸಿದ್ದರು. ಐಟಂ ಸಾಂಗ್ ನೆಲ್ಲ ಮಾಡಬೇಡ ಎಂದು ಕಿವಿಮಾತು ಹೇಳಿದ್ದರು. ಅವರು ಹೇಳಿದ್ದರ ಹಿಂದೆ ಒಳ್ಳೆಯ ಉದ್ದೇಶ ಇತ್ತು. ಆದರೆ ನಾನು ಐಟಂ ಸಾಂಗ್ ಮಾಡೋ ನಿರ್ಧಾರಕ್ಕೆ ಬಂದೆ’ ಎಂದಿದ್ದಾರೆ.
‘ನಾನೇಕೆ ಅವಿತುಕೊಳ್ಳಲಿ? ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ಯಾವುದೇ ಕ್ರೈಮ್ ಮಾಡಿರಲಿಲ್ಲ. ಹೀಗಾಗಿ, ಅವಿತು ಕೂರೋ ಮಾತೇ ಇರಲಿಲ್ಲ. ನಾನು ನನ್ನ ದಾಂಪತ್ಯ ಜೀವನಕ್ಕೆ ಶೇ. 100 ನೀಡಿದ್ದೆ. ಆದಾಗ್ಯೂ ಸಂಬಂಧ ಉಳಿದುಕೊಂಡಿಲ್ಲ. ನಾನು ಮಾಡದೇ ಇರುವ ಕೆಲಸಕ್ಕೆ ನಾನು ಪಶ್ಚಾತಾಪ ಪಡೋದಿಲ್ಲ’ ಎಂದಿದ್ದಾರೆ ನಟಿ ಸಮಂತಾ.