ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪುಟ್ಟಕ್ಕನ್ನ ಮಕ್ಕಳು ಧಾರವಾಹಿ ಆರಂಭದಿಂದಲೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿದೆ. ಅದರಲ್ಲೂ ಡಿಸಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸ್ನೇಹಾ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇದೀಗ ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಸ್ನೇಹಾ ಪಾತ್ರಧಾರಿ ನಿಧನರಾಗಿದ್ದು ಧಾರವಾಹಿ ಪ್ರೇಕ್ಷಕರು ಬೇಸರಗೊಂಡಿದ್ದಾರೆ.
ಸ್ನೇಹಾ ಅಲಿಯಾಸ್ ಸಂಜನಾ ಬುರ್ಲಿ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಿಂದ ಹೊರ ಬರುತ್ತಿದ್ದಾರೆ ಎಂದು ಇತ್ತೀಚೆಗೆ ಸುದ್ದಿ ಆಗಿತ್ತು. ಇದಕ್ಕೆ ಆಕೆ ಮಾಡಿದ್ದ ಪೋಸ್ಟ್ ಕೂಡ ಕಾರಣವಾಗಿತ್ತು. ‘ಕೆಲವೊಂದಕ್ಕೆ ವಿದಾಯ ಹೇಳುವುದು ತುಂಬಾ ಕಷ್ಟ. ಆದರೆ ಕೆಲವೊಂದು ಬೆಳವಣಿಗೆಗೆ ಇದು ಬಹಳ ಅವಶ್ಯಕ ಆಗಿದೆ’ ಎಂದು ಬರೆದುಕೊಂಡಿದ್ದರು. ಈಗ ‘ಪುಟ್ಟಕ್ಕ ಮಕ್ಕಳು’ ಧಾರಾವಾಹಿಯಲ್ಲಿ ಬಂದ ತಿರುವು ನೋಡಿ ಪಾತ್ರ ಕೊನೆ ಆಗೋದು ಖಚಿತ ಎಂದು ವೀಕ್ಷಕರು ಅಂದುಕೊಳ್ಳುತ್ತಿದ್ದಾರೆ.
‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಸಂಜನಾ ಅವರು ಡಿಸಿ ಸ್ನೇಹಾ ಹೆಸರಿನ ಪಾತ್ರ ಮಾಡುತ್ತಿದ್ದರು. ಅವರು ಬಂಗಾರಮ್ಮನ ಜೊತೆ ಅಮ್ಮ ಪುಟ್ಟಕ್ಕನ ಬರ್ತ್ಡೇ ಆಚರಿಸಿಕೊಳ್ಳಲು ಹೊರಟಿದ್ದರು. ಆಗ ಟ್ರಕ್ ಒಂದು ಬಂದು ಇವರು ಚಲಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬಗಿಗೂ ಗಂಭಿರವಾಗಿ ಗಾಯಗಳಾಗಿವೆ.
ಆಗ ಸ್ಥಳಕ್ಕೆ ಬರುವ ಸ್ನೇಹಾ ಪತಿ ಕಂಠಿ, ಇಬ್ಬರನ್ನೂ ಆಸ್ಪತ್ರೆಗೆ ದಾಖಲು ಮಾಡುತ್ತಾನೆ. ಆಸ್ಪತ್ರೆಯಲ್ಲಿ ಸ್ನೇಹಗೆ ಚಿಕಿತ್ಸೆ ನೀಡುತ್ತಿರುವಾಗಲೇ ಕೊನೆಯುಸಿರೆಳೆದಿದ್ದಾರೆ. ಸ್ನೇಹಾ ನಿಧನರಾಗಿದ್ದಾರೆ ಎಂದು ವೈದ್ಯರು ತಿಳಿಸುತ್ತಾರೆ. ಇದನ್ನು ಕೇಳಿ ಕಂಠಿ ಶಾಕ್ಗೆ ಒಳಗಾಗುತ್ತಾನೆ.
ಈಗಾಗಲೇ ಸಂಜನಾ ಪಾತ್ರ ಕೊನೆ ಆಗಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಹೀಗಿರುವಾಗಲೇ ಅಪಘಾತದಲ್ಲಿ ಸ್ನೇಹಾ ಪಾತ್ರ ಕೊನೆ ಆಗುವ ಸೂಚನೆ ಸಿಕ್ಕಿದೆ. ಈ ಎಲ್ಲಾ ಕಾರಣದಿಂದ ಧಾರಾವಾಹಿಯಲ್ಲಿ ಸಂಜನಾ ಪಾತ್ರ ಕೊನೆ ಆಗೋದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಧಾರಾವಾಹಿಗೆ ನಿರ್ದೇಶಕರು ಕೊಟ್ಟ ಈ ತಿರುವು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
ಸಮಯ ಬದಲಾವಣೆ ಮಧ್ಯೆಯೂ ಜನರು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯನ್ನು ನೋಡುತ್ತಿದ್ದರು. ಈ ಧಾರಾವಾಹಿ ಈ ವಾರದ ಟಿಆರ್ಪಿಯಲ್ಲಿ ನಂಬರ್ 1 ಸ್ಥಾನ ಪಡೆಯಿತು. ಬಿಗ್ ಬಾಸ್ ರೀಯಾಲಿಟಿ ಶೋ ಹಿಂದಿಕ್ಕಿ ಪುಟ್ಟಕ್ಕನ ಮಕ್ಕಳು ಉತ್ತಮ ಟಿಆರ್ ಪಿ ಗಳಿಸಿದೆ.