ಕಲಘಟಗಿ: ಕಲಘಟಗಿ ತಾಲ್ಲೂಕಿನ ಮುತ್ತಗಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಗ್ರಾಮದ ಎಪ್ಪತ್ತಕ್ಕೂ ಅಧಿಕ ಜನರು ವಾಂತಿಭೇದಿಯಿಂದ ಆಸ್ವಸ್ಥಗೊಂಡಿದು ಇಂದು ಜಿಲ್ಲಾಧಿಕಾರಿಗಳು ಮುತ್ತಗಿ ಗ್ರಾಮಕ್ಕೆ ಆಗಮಿಸಿದ್ದು ಗ್ರಾಮದ ಊಣಿ ಊಣಿಯಲ್ಲಿ ಮನೆ ಮನೆಗೆ ಭೇಟಿ ನೀಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಮೂಲಕ ಜಾಗೃತಿ ವಹಿಸಬೇಕು ಎಂದು ತಿಳಿಸಿದರು
ಸಾರ್ವಜನಿಕರು ಕೊಳವೆ ಬಾವಿಯಿಂದ ನೀರಿನ ಟ್ಯಾಂಕ್ ಗೆ ನೀರನ್ನು ಸಂಗ್ರಹ ಮಾಡಿ ನಂತರ ಗ್ರಾಮಸ್ಥರಿಗೆ ನೀರು ಬಿಡಲಾಗುತ್ತದೆ. ಆದರೆ, ಹಲವಾರು ವರ್ಷಗಳಿಂದ ನೀರಿನ ಟ್ಯಾಂಕ್ ನ್ನು ಸ್ವಚ್ಛತೆ ಮಾಡದೇ ಇರುವುದರಿಂದ ಈ ಸಮಸ್ಯೆ ಆಗಿದೆ ಎಂದು ಗ್ರಾಮಸ್ಥರು ದಿವ್ಯ ಪ್ರಬು ಡಿಸಿ ಇವರಿಗೆ ತಿಳಿಸಿದರು.
ಈಗಾಗಲೇ ತಾಲೂಕು ಆಸ್ಪತ್ರೆಗೆ ತಹಶೀಲ್ದಾರ್ ಭೇಟಿ ನೀಡಿದ್ದು, ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಇಷ್ಟೆಲ್ಲ ಸಮಸ್ಯೆ ಆಗಿದ್ದರೂ ಸಂಬಂಧ ಪಟ್ಟ ಪಿಡಿಒ ನಿಷ್ಕೋಳಜಿ ಮಾಡಿದ್ದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.