ಆತ ಎಷ್ಟೇ ಬಡವನಾಗಿದ್ದರು ಕೆಲವೊಂದು ಸಂದರ್ಭಗಳು ಅವರನ್ನು ಏಕಾಏಕಿ ಕೋಟ್ಯಾಧಿಪತಿಯಾಗಿ ಮಾಡಿ ಬಿಡುತ್ತವೆ. ಅಂತೆಯೇ ಇಲ್ಲೊಬ್ಬ ಬಡ ಕಾರ್ಮಿಕ ಜಸ್ಟ್ ಎಂಟೇ ಎಂಟು ನಿಮಿಷದಲ್ಲಿ 8.5 ಕೋಟಿ ಗೆದ್ದು ಕೋಟ್ಯಾಧಿಪತಿಯಾಗಿದ್ದಾನೆ.
ಅಮೆರಿಕಾದ ವರ್ಜೀನಿಯಾದ ರೋನೋಕ್ನಲ್ಲಿ ಬಡ ಕಾರ್ಮಿಕನೊಬ್ಬ ಎಂಟೇ ನಿಮಿಷಗಳಲ್ಲಿ ಕೋಟ್ಯಾಧಿಪತಿ ಆಗಿದ್ದಾನೆ. ಇಲ್ಲಿನ 604 ಮಿನಿಟ್ ಮಾರ್ಕೆಟ್ನ ಶಾಪಿಂಗ್ ಮಾಲ್ನಲ್ಲಿ ಆತ ಕಳೆದ 13 ವರ್ಷಗಳಿಂದ ಲಾಟರಿ ಖರೀದಿಸುತ್ತಿದ್ದ. ಇದೇ ತಿಂಗಳು ಕೂಡ ಆತ ಲಾಟರಿ ಖರೀದಿಸಿದ್ದ. ಅಷ್ಟು ವರ್ಷಗಳಿಂದ ಲಾಟರಿ ಖರೀದಿಸುತ್ತಿದ್ದರೂ ಆತನಿಗೆ ಲಾಟರಿಯಲ್ಲಿ ಯಾವುದೇ ಬಹುಮಾನ ಬಾರದೇ ಇದ್ದಿದ್ದನ್ನು ನೋಡಿ ಆತನನನ್ನು ಆತನ ಸ್ನೇಹಿತರು ಗೇಲಿ ಮಾಡಿದ್ದರು.
ಸ್ನೇಹಿತರು ಎಷ್ಟೇ ಗೇಲಿ ಮಾಡಿದ್ರು ಆತ ಕೊಂಚವು ಬೇಸರಿಸಿಕೊಳ್ಳದೆ ಲಾಟರಿ ಖರೀದಿ ಮಾಡುತ್ತಿದ್ದ. ಜೊತೆ ನನ್ನ ಪ್ರಯತ್ನ ನಾನು ಮಾಡ್ತಾ ಇದೀನಿ. ನನಗೂ ಒಂದ್ ದಿನ ಅದೃಷ್ಟ ಖುಲಾಯಿಸುತ್ತೆ. ಖಂಡಿತವಾಗಿಯೂ ನನಗೆ ಲಾಟರಿ ಹೊಡೆದೇ ಹೊಡೆಯುತ್ತೆ ಅಂತ ಹೇಳಿದ. ಅದಾಗಿ ಕೆಲವೇ ಗಂಟೆಗಳಲ್ಲಿ,.. ಆತನಿಗೆ ಜಾಕ್ ಪಾಟ್ ಹೊಡೆದಿದೆ. ಅದೃಷ್ಟ ನೋಡಿ ಟಿಕೆಟ್ ಖರೀದಿಸಿದ 8 ನಿಮಿಷಗಳಲ್ಲೇ ₹8.5 ಕೋಟಿ ಹಣವನ್ನು ಗೆದ್ದಿದ್ದಾನೆ.
ಭಾರತೀಯ ಮೂಲದ ಮಾಲೀಕ ತಿಮಿರ್ ಪಟೇಲ್ 604 ಮಿನಟ್ ಮಾರ್ಕೆಟ್ ಎಂಬ ಶಾಪಿಂಗ್ ಮಾಲ್ ನಲ್ಲಿರುವ ಲಾಟರಿ ಕೌಂಟರ್ ನಲ್ಲಿ ಈ ಲಾಟರಿಯನ್ನು ಆತ ಖರೀದಿಸಿದ್ದ. ಪಟೇಲ್ ಸಹ ಪ್ರತಿದಿನವೂ ಜಾರ್ಜ್ ಹರ್ಟ್ ನನ್ನ ನೋಡಿ ನಗುತ್ತಿದ್ದರು. ಇದೀಗ ಹರ್ಟ್ $1 ಮಿಲಿಯನ್ ಗೆದ್ದಿದ್ದಾನೆ ಅನ್ನೋದು ಗೊತ್ತಾದ ಕೂಡಲೇ ಆತನ ನಮ್ಮ ಪ್ರಾಮಾಣಿಕ ಗ್ರಾಹಕ. 6 ಲಕ್ಷ ಮಂದಿ ಟಿಕೆಟ್ ಖರೀದಿಸಿದ್ದರು. ಈ ಪೈಕಿ ಜಾರ್ಜ್ ಹರ್ಟ್ ಅದೃಷ್ಟವಂತನಾಗಿದ್ದಾನೆ ಎಂಬುದು ಖುಷಿಯ ವಿಚಾರ ಎನ್ನುತ್ತಿದ್ದಾರೆ ತಿಮಿರ್ ಪಟೇಲ್. ಕೊನೆಗೂ ಅವನ ಅದೃಷ್ಟದ ದಿನ ಬಂದೇ ಬಿಟ್ಟಿದೆ. ಅವನ ತಾಳ್ಮೆ ಹಾಗೂ ಅವನ ಆಶಾಭಾವನೆ ಸೋತಿಲ್ಲ ಎಂದು ಪಟೇಲ್ ಹೇಳಿದ್ದಾರೆ.
ಅಂದಹಾಗೆ, ಹಂಟ್ ಅವರು ಗೆದ್ದಿದ್ದು 8.50 ಕೋಟಿ ರೂ. ಆಗಿದ್ದರೂ ಅವರ ಕೈಗೆ ಬಂದಿರುವುದು 4.80 ಕೋಟಿ ರೂ. ಮಾತ್ರ. ಏಕೆಂದರೆ, ಸ್ಥಳೀಯ ತೆರಿಗೆ ನಿಯಮಗಳಿಗೆ ಈ ಲಾಟರಿ ಜಾಕ್ ಪಾಟ್ ಹಣ ಒಳಪಟ್ಟಿದೆ. ಹಾಗೂ ಲಾಟರಿ ಮಾರಾಟ ಮಾಡಿದ ಏಜೆಂಟಿಗೆ ಕಮೀಷನ್ ಇತ್ಯಾದಿ ಷರತ್ತುಗಳಿವೆ. ಹಾಗಾಗಿ, ಹಂಟ್ ಅವರ ಕೈಗೆ 4.80 ಕೋಟಿ ರೂ. ಮಾತ್ರ ಸೇರಿದೆ.