ವ್ಯಾಪಾರಿಗಳು, ವಿದ್ಯಾರ್ಥಿಗಳು, ಕಚೇರಿ ಕೆಲಸಕ್ಕೆ ಹೋಗುವವರು ಸೇರಿದಂತೆ ಯಾರೇ ಆಗಲಿ, ಪ್ರತಿದಿನ ನಮಗೆ ಉತ್ತಮ ದಿನವಾಗಿರಬೇಕು ಎಂದು ಬಯಸುತ್ತಾರೆ. ಒಂದು ವೇಳೆ ಏನಾದರೂ ಸಮಸ್ಯೆ ಅನುಭವಿಸಿದಲ್ಲಿ, ಛೆ, ಇಂದು ಬೆಳಗ್ಗೆ ಎದ್ದ ಕೂಡಲೇ ಯಾರ ಮುಖ ನೋಡಿದ್ದೆ ಎಂದು ತಮ್ಮ ದುರಾದೃಷ್ಟವನ್ನು ನೆನೆದು ಬೇಸರ ವ್ಯಕ್ತಪಡಿಸುತ್ತಾರೆ. ಒಂದು ವೇಳೆ ಆ ದಿನ ಶುಭ ಸಂಭವಿಸಿದ್ದಲ್ಲಿ ಕೂಡಾ, ಅದೇ ಉದ್ಘಾರ ತೆಗೆಯುತ್ತಾರೆ
ಬೆಳಗ್ಗೆ ಎದ್ದ ಕೂಡಲೇ ನಾವು ನಿತ್ಯಕರ್ಮಗಳನ್ನು ಪೂರೈಸಿಕೊಂಡು ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತೇವೆ. ಆ ದಿನವು ಉತ್ತಮವಾಗಿರಲಿ ಎಂದು ಪ್ರತಿಯೊಬ್ಬರು ಮನಸ್ಸಿನಲ್ಲಿ ಪ್ರಾರ್ಥಿಸುವರು. ಆದರೆ ಕೆಲವು ಜನರು ತುಂಬಾ ಕೆಟ್ಟ ಮನಸ್ಥಿತಿಯೊಂದಿಗೆ ಎದ್ದೇಳುತ್ತಾರೆ. ಇದರಿಂದಾಗಿ ಅವರ ಸಂಪೂರ್ಣ ದಿನ ಕೆಟ್ಟದಾಗಿರಬಹುದು.
ಎಸ್, ಬೆಳಗ್ಗೆ ಎದ್ದ ತಕ್ಷಣ ಕನ್ನಡಿಯಲ್ಲಿ ಮುಖ ನೋಡುವ ಅಭ್ಯಾಸ ಕೆಲವರಿಗೆ ಇರುತ್ತದೆ. ಆದರೆ ಇದು ಶುಭವಲ್ಲ. ಇದರಿಂದ ದಿನವಿಡೀ ನೀವು ಆಲಸ್ಯ ಅನುಭವಿಸುವಿರಿ.
ಬೆಳಿಗ್ಗೆ ಎದ್ದಾಗ ನಿಂತ ಗಡಿಯಾರವನ್ನು ನೋಡಬಾರದು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ನಿಂತ ಗಡಿಯಾರವನ್ನು ನೋಡುವುದು ನಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ನಿಂತ ಗಡಿಯಾರವನ್ನು ಮನೆಯಿಂದ ಸಾಧ್ಯವಾದಷ್ಟು ಬೇಗ ತೆಗೆದುಹಾಕಿ.
ಎದ್ದ ಕೂಡಲೇ ಬೆಕ್ಕು, ನಾಯಿ ನೋಡುವುದು ಕೆಟ್ಟ ಶಕುನ ಎಂದು ಪರಿಗಣಿಸಲಾಗುತ್ತದೆ. ಆ ದಿನ ನೀವು ಯಾರ ಜೊತೆಯಾದರೂ ಜಗಳ ಆಡಬಹುದು.
ಎದ್ದ ಕೂಡಲೇ ಇದನ್ನು ನೋಡಿ: ಬೆಳಿಗ್ಗೆ ಎದ್ದ ತಕ್ಷಣ ಅಂಗೈಗಳನ್ನು ನೋಡುವುದರಿಂದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ದರ್ಶನವಾಗುತ್ತದೆ. ದಿನವನ್ನು ಮಂಗಳಕರವಾಗಿಸುತ್ತದೆ. ಅಂಗೈ ನೋಡುವುದು ಒಳಿತು. ದೇವರ ನಾಮವನ್ನು ಜಪಿಸಿ.
ದಿನವನ್ನು ಹೇಗೆ ಪ್ರಾರಂಭಿಸುವುದು? : ಮುಂಜಾನೆ ಎದ್ದು ಧ್ಯಾನ ಮಾಡಬೇಕು ಎಂದು ಹೇಳಲಾಗುತ್ತದೆ. ಮನಸ್ಸು ಏಕಾಗ್ರತೆ ಹೊಂದುತ್ತದೆ. ವ್ಯಕ್ತಿಯ ಮನಸ್ಸಿನಲ್ಲಿ ಒಳ್ಳೆಯ ಆಲೋಚನೆಗಳು ಬರುತ್ತವೆ. ದಿನದ ಶುಭಾರಂಭವಾಗುತ್ತದೆ ಮತ್ತು ವ್ಯಕ್ತಿಯ ಮನಸ್ಸಿಗೆ ಶಾಂತಿ ಸಿಗುತ್ತದೆ.