ವಿಜಯನಗರದ ಹಂಪಿನಗರದಲ್ಲಿ ಕನ್ನಡ ಬರಲ್ಲ ಅಂದಿದ್ದಕ್ಕೆ ಕ್ಯಾಶಿಯರ್ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ ಮದ್ಯ ಸೇವಿಸಿದ ವ್ಯಕ್ತಿಯಿಂದ ಅಂಗಡಿ ವ್ಯಾಪಾರಿ ಮೇಲೆ ಹಲ್ಲೆ ನಡೆಸಿದ್ದಾನೆ. ಶನಿವಾರ ಮಧ್ಯಾಹ್ನ 3:30ಕ್ಕೆ ಈ ಘಟನೆ ನಡೆದಿದ್ದು ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಅಂಗಡಿಗೆ ಬರುವ ಮೊದಲೇ ಮದ್ಯ ಸೇವಿಸಿದ್ದ ವ್ಯಕ್ತಿ ವಸ್ತು ಖರೀದಿಸಿದ ಬಳಿಕ ಹಣ ಪಾವತಿಸಿರಲಿಲ್ಲ. ಈ ವೇಳೆ ಹಣ ಪಾವತಿಸುವಂತೆ ಕ್ಯಾಶಿಯರ್ ಹೇಳಿದಾಗ ಕನ್ನಡದಲ್ಲಿ ಮಾತನಾಡು ಎಂದಿದ್ದಾನೆ. ಈ ವೇಳೆ ಕನ್ನಡ ಬರುವುದಿಲ್ಲ ಎಂದಿದ್ದಕ್ಕೆ ಅತನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ನಂತರ ಕ್ಯಾಶಿಯರ್ ಮೇಲೆ ಹಲ್ಲೆ ಮಾಡಿ ಕನ್ನಡ ಬಾರದೇ ಇದ್ದರೆ ಕಲಿ ಎಂದು ಅವಾಜ್ ಹಾಕಿದ್ದಾನೆ.