ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಸೇರಿ 4 ತಿಂಗಳಾಗಿದೆ. ಸದ್ಯ ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಅವರ ಜಾಮೀನು ಅರ್ಜಿ ತಿರಸ್ಕರಿಸಲಾಗಿದ್ದು ದರ್ಶನ್ ಪರ ವಕೀಲರು ಹೈಕೋರ್ಟ್ ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಈ ಮಧ್ಯೆ ತನನ್ನು ನೋಡಲು ಬರುವ ನಟ, ನಟಿಯರಿಗೆ ದರ್ಶನ್ ನೋ ಎಂದಿದ್ದಾರಂತೆ.
ಯಾರೂ ಬಳ್ಳಾರಿ ಜೈಲಿಗೆ ಬರುವುದು ಬೇಡ. ಸದ್ಯಕ್ಕೆ ನನಗೆ ಯಾರನ್ನೂ ಭೇಟಿಯಾಗಲು ಇಷ್ಟ ಇಲ್ಲ ಎಂದು ದರ್ಶನ್ ಪತ್ನಿ ವಿಜಯಲಕ್ಷ್ಮಿ ಮೂಲಕ ಸಂದೇಶ ರವಾನೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ದರ್ಶನ್ ಬಳ್ಳಾರಿ ಜೈಲಿಗೆ ಬಂದು ಎರಡು ತಿಂಗಳಾಗಿದೆ. ಈ ಎರಡು ತಿಂಗಳ ಅವಧಿಯಲ್ಲಿ ಚಾರ್ಜ್ಶೀಟ್, ಜಾಮೀನು ಟೆನ್ಶನ್ ಜೊತೆಗೆ ಜೊತೆಗೆ ಬೆನ್ನು ನೋವಿನಿಂದ ಹೈರಾಣಾಗಿದ್ದಾರೆ. ಎರಡು ತಿಂಗಳಲ್ಲಿ ಪತ್ನಿ, ತಾಯಿ, ಸಹೋದರ, ಸಹೋದರಿ, ಸಂಬಂಧಿಗಳಾದ ಸುಶಾಂತ್, ಹೇಮಂತ್, ಚಂದ್ರ ಭೇಟಿ ಮಾಡಿದ್ದಾರೆ. ಅಲ್ಲದೇ ನಟ ಧನ್ವಿರ್, ನಿರ್ದೇಶಕ ಪ್ರಕಾಶ್, ಹರಿಕೃಷ್ಣ, ಶೈಲಜಾ ನಾಗ್ ಸೇರಿ ಒಂದಷ್ಟು ಸ್ನೇಹಿತರು ಬಂದು ಹೋಗಿದ್ದಾರೆ. ಇದೀಗ ದರ್ಶನ್ ತನ್ನನ್ನು ನೋಡಲು ಯಾರು ಜೈಲಿಗೆ ಬರುವುದು ಬೇಡ ಎಂದು ಹೇಳಿದ್ದಾರಂತೆ.