ಹಸನ್ ನಸ್ರಲ್ಲಾ ಹತ್ಯೆಯಾದ ಒಂದು ತಿಂಗಳ ಬಳಿಕ ಹಿಜ್ಬುಲ್ಲಾ ಮುಖ್ಯಸ್ಥನಾಗಿ
ನೈಮ್ ಖಾಸಿಮ್‘ನನ್ನು ನೇಮಕ ಮಾಡಲಾಗಿದೆ. ಇಸ್ರೇಲಿ ರಕ್ಷಣಾ ಪಡೆಗಳು ನಸ್ರಲ್ಲಾನನ್ನ ಹತ್ಯೆ ಮಾಡಿದ ಬಳಿಕ ನೈಮ್ ಖಾಸಿಮ್ ಭಯೋತ್ಪಾದಕ ಸಂಘಟನೆಯ ಉಪ ಮುಖ್ಯಸ್ಥನಾಗಿದ್ದಾನೆ. ಇದೀಗ ಆತನನ್ನು ಮುಖ್ಯಸ್ಥನಾಗಿ ನೇಮಕ ಮಾಡಲಾಗಿದೆ.
ಕಳೆದ ತಿಂಗಳು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕೊಲ್ಲಲ್ಪಟ್ಟ ತನ್ನ ನಾಯಕ ಹಸನ್ ನಸ್ರಲ್ಲಾ ಸ್ಥಾನಕ್ಕೆ ನೈಮ್ ಕಾಸ್ಸೆಮ್’ನನ್ನು ಆಯ್ಕೆ ಮಾಡಲಾಗಿದೆ ಎಂದು ಲೆಬನಾನ್’ನ ಹಿಜ್ಬುಲ್ಲಾ ಉಗ್ರಗಾಮಿ ಗುಂಪು ತಿಳಿಸಿದೆ.