ಹುಬ್ಬಳ್ಳಿ: ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಯಾಗಿರುವ ಕನ್ನಡ ಸಾಹಿತ್ಯ ಪರಿಷತ್ ಗೆ ನೂತನವಾಗಿ ಮಾರ್ಗದರ್ಶಕ ಮಂಡಳಿಯನ್ನು ರಚಿಸಲಾಗಿದ್ದು ಸಮಿತಿಯಲ್ಲಿ ಅನೇಕ ಪ್ರಗತಿಪರ ಕನ್ನಡ ಪರ ಹೋರಾಟಗಾರರನ್ನು ನೇಮಕ ಮಾಡಲಾಗಿದ್ದು ಧಾರವಾಡ ಜಿಲ್ಲೆಯಿಂದ ರಾಜ್ಯಮಟ್ಟದ ಸಮಿತಿಯ ಮಾರ್ಗದರ್ಶಕ ಸದಸ್ಯರಾಗಿ ಪ್ರಗತಿಪರ ವಿಚಾರವಾದಿ ಕರ್ನಾಟಕ ನೆಲ ಜಲ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಉತ್ಸಾಹಿ ಕನ್ನಡಪರ ಹೋರಾಟಗಾರ ಹುಬ್ಬಳ್ಳಿ ಉಣಕಲ್ಲನ ಗಂಗಾಧರ ದೊಡವಾಡರನ್ನು ತತ್ ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಆಗುಹೋಗುಗಳಲ್ಲಿ ಸೂಕ್ತ ಮಾರ್ಗದರ್ಶನ ನೀಡುವುದರ ಜೊತೆಗೆ ಕನ್ನಡದ ಗಡಿಯಿಂದ ಗಡಿ ವರೆಗಿನ ಕನ್ನಡ ತನ ಕಟ್ಟುವಲ್ಲಿ ಶ್ರಮಿಸಬೇಕೆಂದು ಕರ್ನಾಟಕ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಹೇಶ್ ಜೋಶಿ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.