ದೇಶದಲ್ಲಿ ಸುಮಾರು 88% ಜನರು ಕೆಲವು ರೀತಿಯ ಆತಂಕದಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ. ಅಂದರೆ, ಪ್ರತಿ 100 ಜನರಲ್ಲಿ 88 ಜನರು ಈ ಮಾನಸಿಕ ಅಸ್ವಸ್ಥತೆಗೆ ಬಲಿಯಾಗುತ್ತಾರೆ. ಆದ್ದರಿಂದ ನಿಮ್ಮ ಸುತ್ತಮುತ್ತಲೂ ಯಾರಾದರೂ ಪ್ಯಾನಿಕ್ ಅಟ್ಯಾಕ್ನಿಂದ ಬಳಲುತ್ತಿದ್ದರೆ ಈ ರೀತಿ ಮಾಡಿ ಎಂದು ಮನೋವೈದ್ಯರು ಸಲಹೆ ನೀಡುತ್ತಾರೆ.
ನೀರು ಕುಡಿಸುವುದರಿಂದ ಅವರಲ್ಲಿ ಸ್ವಲ್ಪ ಮಟ್ಟದ ಭಯ, ಆತಂಕದಿಂದ ಕಡಿಮೆಯಾಗುತ್ತದೆ. ತಣ್ಣೀರು ಕುಡಿಯುವುದರಿಂದ ಪ್ಯಾರಾಸಿಂಪಥೆಟಿಕ್ ನರಮಂಡಲವನ್ನು ಪ್ರಚೋದಿಸುತ್ತದೆ. ಇದು ವ್ಯಕ್ತಿಯನ್ನು ಶಾಂತಗೊಳಿಸಲು ಸಹಕಾರಿಯಾಗಿದೆ.
ಪ್ಯಾನಿಕ್ ಅಟ್ಯಾಕ್ಗೆ ಒಳಗಾದ ವ್ಯಕ್ತಿಯ ಕೈ ಮತ್ತು ಪಾದಗಳನ್ನು ತಣ್ಣೀರಿನಿಂದ ತೊಳೆಯಿರಿ. ಇದಲ್ಲದೇ ಒಂದು ಟವೆಲ್ ಅನ್ನು ಒದ್ದೆ ಮಾಡಿ ಮುಖದ ಮೇಲೆ ಅಥವಾ ಕುತ್ತಿಗೆಗೆ ಹಾಕಿ. ಇದು ಅವರನ್ನು ಭಯದಿಂದ ಸ್ವಲ್ಪ ಶಾಂತಗೊಳಿಸಲು ಸಹಾಯ ಮಾಡುತ್ತದೆ
ನಿಮ್ಮ ಸುತ್ತಮುತ್ತ ಅಥವಾ ಮನೆಯಲ್ಲಿ ಯಾರಿಗಾದರೂ ಪ್ಯಾನಿಕ್ ಅಟ್ಯಾಕ್ ಆದರೆ ಅವರ ವರ್ತನೆ ಕಂಡು ದೂರ ಹೋಗಬೇಡಿ. ಬದಲಾಗಿ ಪ್ರೀತಿಯಿಂದ ಮಾತನಾಡಿಸಿ.