ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲಿನಲ್ಲಿದ್ದ ನಟ ದರ್ಶನ್ ಐದು ತಿಂಗಳ ಬಳಿಕ ಹೊರ ಬಂದಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಒಂದೂವರೆ ತಿಂಗಳು ಜಾಮೀನು ನೀಡಲಾಗಿದೆ. ದರ್ಶನ್ ಅವರು ಈಗ ಕೆಲವರ ಬಳಿ ಕ್ಷಮೆ ಕೇಳಿದ್ದಾರೆ ಎಂಬ ಸುದ್ದಿ ಹರಿದಾಡಿದೆ. ಅವರು ಕ್ಷಮೆ ಕೇಳಿದ್ದು ಯಾರ ಬಳಿ ಎಂಬುದಕ್ಕೆ ಉತ್ತರ ಇಲ್ಲಿದೆ.
ದರ್ಶನ್ ಅವರು ರೇಣುಕಾ ಸ್ವಾನಿ ಕೊಲೆ ಕೇಸ್ನಲ್ಲಿ ಜೂನ್ 11ರಂದು ಅರೆಸ್ಟ್ ಆದರು. ಈ ಅವಧಿಯಲ್ಲಿ ದರ್ಶನ್ ಅವರು ಸಾಕಷ್ಟು ಕುಗ್ಗಿದ್ದಾರೆ. ಬೆಂಗಳೂರು ಜೈಲಿನಲ್ಲಿ ಹಾಯಾಗಿ ಸಮಯ ಕಳೆಯುತ್ತಿದ್ದ ಅವರಿಗೆ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಸಾಕಷ್ಟು ಸಮಸ್ಯೆ ಆದವು. ಬೆನ್ನು ನೋವು ಬಿಟ್ಟು ಬಿಡದೆ ಕಾಡುತ್ತಿದೆ. ಇದರಿಂದ ಮುಕ್ತಿ ಪಡೆಯಲು ದರ್ಶನ್ ಎರಡು ವಾರ ಜಾಮೀನು ಪಡೆದು ಬಂದಿದ್ದಾರೆ. ಚಿಕಿತ್ಸೆಯ ಬಳಿಕ ಮತ್ತೆ ಜೈಲು ಸೇರುವುದು ಅನಿವಾರ್ಯವಾಗಿದೆ.
ಬಳ್ಳಾರಿ ಜೈಲಿನಲ್ಲಿ ದರ್ಶನ್ ಎರಡು ತಿಂಗಳು ಇದ್ದರು. ಈಗ ದರ್ಶನ್ ಅವರು ಜೈಲಿನಲ್ಲಿದ್ದ ಸಿಬ್ಬಂದಿಗೆ ಕ್ಷಮೆ ಕೇಳಿದ್ದಾರೆ. ‘ನನ್ನಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ’ ಎಂದು ದರ್ಶನ್ ಕೇಳಿರುವುದಾಗಿ ವರದಿ ಆಗಿದೆ.
‘ಪದೇ ಪದೇ ಅದು ಬೇಕು, ಇದು ಬೇಕು ಎಂದು ಕೇಳುತ್ತಿದ್ದೆ. ನಿಮಗೆ ತೊಂದರೆ ಕೊಟ್ಟಿದ್ದೇನೆ ಕ್ಷಮಿಸಿ’ ಎಂದು ದರ್ಶನ್ ಕ್ಷಮೆ ಕೇಳಿದ್ದಾರೆ ಎನ್ನಲಾಗಿದೆ. ಅಲ್ಲದೆ, ಹೈ ಸೆಕ್ಯುರಿಟಿ ಸೆಲ್ನ ಸಿಬ್ಬಂದಿಗೆ ಅವರು ಧನ್ಯವಾದ ತಿಳಿಸಿದ್ದಾರೆ. ಇನ್ನು ಸಿಬ್ಬಂದಿಗಳೂ ದರ್ಶನ್ಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ. ‘ಉತ್ತಮ ಚಿಕಿತ್ಸೆ ಪಡೆದುಕೊಳ್ಳಿ, ಆರೋಗ್ಯದ ಬಗ್ಗೆ ಗಮನ ಕೊಡಿ’ ಎಂದು ಜೈಲು ಸಿಬ್ಬಂದಿ ಹೇಳಿದ್ದಾರೆ ಎನ್ನಲಾಗಿದೆ.