ಮದುವೆಗೆ ವಯಸ್ಸಿನ ಹಂಗಿಲ್ಲ ಅನ್ನೋದು ಇತ್ತೀಚೆಗೆ ಮತ್ತೆ ಮತ್ತೆ ಸಾಭೀತಾಗುತ್ತಿದೆ. ಇತ್ತೀಚೆಗಷ್ಟೇ ವಯಸ್ಸಾದ ಮತ್ತೊಬ್ಬ ನಟ ಮದುವೆಯಾಗಿ ಸುದ್ದಿಯಾಗಿದ್ದಾರೆ. ಮಲಯಾಳಂನ ಜನಪ್ರಿಯ ಕಿರುತೆರೆ ನಟ ಕ್ರಿಸ್ ವೇಣುಗೋಪಾಲ್ (49) ಇತ್ತೀಚೆಗೆ ಕಿರುತೆರೆ ನಟಿ ದಿವ್ಯಾ ಶ್ರೀಧರ್ ಅವರನ್ನು ವಿವಾಹವಾಗಿದ್ದು ಇವರ ಮದುವೆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಕ್ಟೋಬರ್ 30 ರಂದು ಕ್ರಿಸ್ ವೇಣುಗೋಪಾಲ್ ಹಾಗೂ ದಿವ್ಯಾ ಶ್ರೀಧರ್ ಹಸೆಮಣೆ ಏರಿದ್ದಾರೆ. ಇಳಿವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿಗೆ ಅಭಿಮಾನಿಗಳು ಅಭಿನಂದನೆಗಳನ್ನು ತಿಳಿಸಿದ್ದಾರೆ.
ಜನಪ್ರಿಯ ಮಲಯಾಳಂ ಧಾರಾವಾಹಿ “ಪಥರಮಟ್ಟು” ಸೆಟ್ನಲ್ಲಿ ಭೇಟಿಯಾದ ವೇಣುಗೋಪಾಲ್ ಹಾಗೂ ದಿವ್ಯಾ ನಡುವೆ ಮೊದಲು ಸ್ನೇಹ ಶುರುವಾಗಿದೆ. ಆ ಬಳಿಕ ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾಗಿ ಪರಸ್ಪರ ಪ್ರೀತಿಸಲು ಆರಂಭವಿಸಿದ್ದಾರೆ. ಇದೀಗ ಮನೆಯವರ ಒಪ್ಪಿಗೆ ಪಡೆದು ಇಬ್ಬರು ಸತಿ ಪತಿಗಳಾಗಿದ್ದಾರೆ. ತಮ್ಮ ಪ್ರೀತಿಪಾತ್ರರ ಸಮ್ಮುಖದಲ್ಲಿ ಗುರುವಾಯೂರು ದೇವಸ್ಥಾನದಲ್ಲಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮಲಯಾಳಂ ಮತ್ತು ತಮಿಳು ಧಾರಾವಾಹಿಗಳಲ್ಲಿ ನೆಗೆಟಿವ್ ಶೇಡ್ ಇರುವ ಪಾತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುವ ಮೂಲಕ ದಿವ್ಯಾ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಕ್ರಿಸ್ ಪ್ರಪೋಸ್ ಮಾಡಿದಾಗ ಮೊದಲಿಗೆ ಸ್ವಲ್ಪ ಹಿಂಜರಿದಿದ್ದರು. ಮೊದಮೊದಲು ಕ್ರಿಸ್ ನನ್ನ ಜೊತೆ ಆಟವಾಡುತ್ತಿದ್ದಾನೆ ಅಂತ ಅಂದುಕೊಂಡಿದ್ದೆ. ನನಗಿಂತ ತುಂಬಾ ಎತ್ತರದಲ್ಲಿ ಇದ್ದಾನೆ ಅಂತ ಅಂದುಕೊಂಡಿದ್ದೆ.ಆದರೆ ನಂತರ ಈ ವಿಚಾರದಲ್ಲಿ ತುಂಬಾ ಸೀರಿಯಸ್ ಆಗಿದ್ದು, ನನ್ನನ್ನು ಮದುವೆಯಾಗಲು ಬಯಸುತ್ತಿದ್ದಾರೆ ಎಂದು ತಿಳಿದು ಬಂದಿದೆ ಎಂದರು.
ಎರಡನೇ ಮದುವೆ: ದಿವ್ಯಾ ಈಗಾಗಲೇ ಮದುವೆಯಾಗಿದ್ದಾರೆ. ಆಕೆಗೆ ಮೊದಲ ಪತಿಯೊಂದಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಮದುವೆಯ ನಿರ್ಧಾರವನ್ನು ಕ್ರಿಸ್ ಅವರ ಮಕ್ಕಳೊಂದಿಗೆ ಚರ್ಚಿಸಿ ಅವರ ಅಭಿಪ್ರಾಯವನ್ನು ಪಡೆದಿದ್ದಾರೆ ಎನ್ನಲಾಗಿದೆ. ‘ಅಮ್ಮ…ನೀನು ನನ್ನ ಜೊತೆಗಿದ್ದರೆ ಮತ್ತೆ ಮದುವೆಯಾಗಲು ನನ್ನ ಅಭ್ಯಂತರವಿಲ್ಲ’ ಎಂದು ಮಗಳು ಹೇಳಿದ್ದನ್ನು ದಿವ್ಯಾ ಬಹಿರಂಗಪಡಿಸಿದ್ದಾರೆ. “ಅವರು ಈಗ ತುಂಬಾ ಸಂತೋಷವಾಗಿದ್ದಾರೆ, ಅವರಿಗೆ ಒಳ್ಳೆಯ ತಂದೆ ಇದ್ದಾರೆ ಎಂದು ನಟಿ ಹೇಳಿದರು.
ಮೊದಲ ಮದುವೆಯ ರಹಸ್ಯ: ದಿವ್ಯಾ ಅವರು ಕ್ರಿಸ್ನ ಪ್ರೇರಕ ತರಗತಿಗೆ ಕಾಲಕಾಲಕ್ಕೆ ಹಾಜರಾಗಿದ್ದೇನೆ, ಆದರೆ ತಾನು ಅವನನ್ನು ಮದುವೆಯಾಗುತ್ತೇನೆ ಎಂದು ಎಂದಿಗೂ ಯೋಚಿಸಲಿಲ್ಲ. ತನ್ನ ಮೊದಲ ಮದುವೆ ತುಂಬಾ ಗೌಪ್ಯವಾಗಿತ್ತು ಮತ್ತು ಮೊದಲ ಪತಿ ತನ್ನಿಂದ ದೂರವಾಗಿದ್ದಾನೆ ಮತ್ತು ಅಂಥಹ ಸಂಬಂಧವನ್ನು ನಿಜವಾದ ಮದುವೆ ಎಂದು ಕರೆಯಲಾಗುವುದಿಲ್ಲ ಎಂದು ಅವರು ಹೇಳಿದರು.
ಕ್ರಿಸ್ ವೇಣುಗೋಪಾಲ್ ಒಬ್ಬ ನಟ, ಬರಹಗಾರ ಮತ್ತು ಪ್ರೇರಕ ಭಾಷಣಕಾರ. ಅವರು “ಪುಲ್ಲು ರೈಸಿಂಗ್”, “ಸಂಭವಸ್ಥಳತು ನಿನ್ನುಮ್” ಮುಂತಾದ ಧಾರಾವಾಹಿಗಳು ಮತ್ತು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಕ್ರಿಸ್ ನನ್ನು ಮದುವೆಯಾಗಿದ್ದು ನನ್ನ ಜೀವನದಲ್ಲಿ ಹೊಸ ಅಧ್ಯಾಯ ಎನ್ನುತ್ತಾರೆ ದಿವ್ಯಾ. ತನ್ನನ್ನು ಮತ್ತು ತನ್ನ ಕುಟುಂಬವನ್ನು ಒಪ್ಪಿಕೊಳ್ಳುವ ಸಂಗಾತಿಯನ್ನು ಕಂಡುಕೊಂಡಿದ್ದಕ್ಕೆ ನನಗೆ ಸಂತೋಷವಾಗಿದೆ ಮತ್ತು ಇದು ತನಗೆ ಎರಡನೇ ಅವಕಾಶ ಎಂದು ಭಾವಿಸುತ್ತೇನೆ ಎಂದಿದ್ದಾರೆ.