ಸಲ್ಮಾನ್ ಖಾನ್ಗೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ನಿಂದ ಪದೇಪದೇ ಕೊಲೆ ಬೆದರಿಕೆ ಬರುತ್ತಲೆ ಇದೆ. ಇತ್ತೀಚೆಗಷ್ಟೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ನವರು ಎನ್ನಲಾದ ಕೆಲವರು ಸಲ್ಮಾನ್ ಖಾನ್ರ ಆಪ್ತ ಬಾಬಾ ಸಿದ್ಧಿಕಿಯನ್ನು ಹತ್ಯೆ ಮಾಡಿದ್ದಾರೆ. ಲಾರೆನ್ಸ್ ಬಿಷ್ಣೋಯಿ ಸಲ್ಮಾನ್ ಖಾನ್ ಅವರನ್ನು ಕೊಂದೇ ಕೊಲ್ಲುವುದಾಗಿ ಹೇಳಿದ್ದಾರೆ. ಇದರ ನಡುವೆ ಸಲ್ಮಾನ್ ಖಾನ್ರ ಮಾಜಿ ಗೆಳತಿ ಸೋಮಿ ಅಲಿ, ‘ಲಾರೆನ್ಸ್ ಬಿಷ್ಣೋಯಿಗಿಂತಲೂ ಸಲ್ಮಾನ್ ಖಾನ್ ಕ್ರೂರ’ ಎಂದು ಹೇಳಿದ್ದಾರೆ. ಸೋಮಿಯ ಈ ಹೇಳಿಕೆ ವೈರಲ್ ಆಗುತ್ತಿದೆ.
ಐಎಎನ್ಎಸ್ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಸೋಮಿ ಅಲಿ, ‘ಬಿಷ್ಣೋಯಿಗಿಂತಲೂ ಸಲ್ಮಾನ್ ಖಾನ್ ಕ್ರೂರ. ಆತನೊಂದಿಗೆ ರಿಲೇಷನ್ಶಿಪ್ನಲ್ಲಿದ್ದಾಗ ದೈಹಿಕ ಹಾಗೂ ಮಾನಸಿಕ ಹಿಂಸೆಯನ್ನು ನಾನು ಅನುಭವಿಸಿದ್ದೆ. ನಾನು ಮಾತ್ರವೇ ಅಲ್ಲ ಸಲ್ಮಾನ್ ಖಾನ್ ಜೊತೆಗೆ ಪ್ರೇಮ ಸಂಬಂಧದಲ್ಲಿದ್ದ ಎಲ್ಲ ನಟಿಯರೂ ಸಹ ಸಾಕಷ್ಟು ಹಿಂಸೆ ಮತ್ತು ನೋವನ್ನು ಅನುಭವಿಸಿದ್ದಾರೆ, ಆದರೆ ನನ್ನಷ್ಟು ಕೆಟ್ಟದಾಗಿ ಆತ ಇನ್ಯಾರೊಂದಿಗೂ ನಡೆದುಕೊಂಡಿರಲಿಲ್ಲ’ ಎಂದಿದ್ದಾರೆ.
‘ಐಶ್ವರ್ಯಾ ರೈ ಮೇಲೆಯೂ ಸಹ ಬಹಳ ಕೆಟ್ಟದಾಗಿ ಆತ ಹಲ್ಲೆ ಮಾಡಿದ್ದ. ಐಶ್ವರ್ಯಾ ಗೆ ಹೊಡೆದು ಆಕೆಯ ಭುಜದ ಮೂಳೆಯನ್ನೇ ಮುರಿದಿದ್ದ’ ಎಂದಿರುವ ಸೋಮಿ, ‘ಕತ್ರಿನಾ ಕೈಫ್ಗೆ ಯಾವ ರೀತಿ ಹಿಂಸೆ ಕೊಟ್ಟಿದ್ದ ಎಂಬುದು ನನಗೆ ಗೊತ್ತಿಲ್ಲ’ ಎಂದಿದ್ದಾರೆ. ‘ಸಲ್ಮಾನ್ ಖಾನ್ ನನ್ನೊಂದಿಗೆ ನಡೆದುಕೊಂಡಿರುವ ರೀತಿಯನ್ನು ನೆನಪಿಸಿಕೊಂಡರೆ, ಸಲ್ಮಾನ್ ಮುಂದೆ ಬಿಷ್ಣೋಯಿ ಏನೂ ಇಲ್ಲ ಅನಿಸುತ್ತದೆ’ ಎಂದಿದ್ದಾರೆ ಸೋಮಿ ಅಲಿ.
ಸೋಮಿ ಅಲಿ ಹಿಂದಿಯ ಎಂಟು ಸಿನಿಮಾಗಳಲ್ಲಿ ನಟಿಸಿದ್ದಾರೆ. 1991 ರಿಂದ ಸುಮಾರು ಎಂಟು ವರ್ಷಗಳ ಕಾಲ ಸೋಮಿ ಅಲಿ ಹಾಗೂ ಸಲ್ಮಾನ್ ಖಾನ್ ಪ್ರೀತಿಯಲ್ಲಿದ್ದರು. ಬಳಿಕ ಸಲ್ಮಾನ್ ಖಾನ್ ಐಶ್ವರ್ಯಾ ರೈ ಅನ್ನು ಪ್ರೀತಿಸಲು ಪ್ರಾರಂಭಿಸಿದರು ಎನ್ನಲಾಗುತ್ತದೆ. 1997 ರಲ್ಲಿ ‘ಚುಪ್’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದ ಸೋಮಿ ಅಲಿ ಆ ನಂತರ ಭಾರತ ಬಿಟ್ಟು ಫ್ಲೋರಿಡಾಕ್ಕೆ ತೆರಳಿದ್ದರು. ಬಳಿಕ ಯಾವುದೇ ಹಿಂದಿ ಸಿನಿಮಾದಲ್ಲಿ ನಟಿಸಲಿಲ್ಲ.
ಸಲ್ಮಾನ್ ಖಾನ್ಗೆ ಲಾರೆನ್ಸ್ ಬಿಷ್ಣೋಯಿಯಿಂದ ಬೆದರಿಕೆ ಬಂದಾಗಲೂ ಹೇಳಿಕೆ ನೀಡಿದ್ದ ಸೋಮಿ ಅಲಿ, ಲಾರೆನ್ಸ್ ಬಿಷ್ಣೋಯಿ ಫೋನ್ ನಂಬರ್ ಇದ್ದರೆ ಕೊಡಿ ನಾನು ಲಾರೆನ್ಸ್ ಬಿಷ್ಣೋಯಿ ಬಳಿ ಮಾತನಾಡುತ್ತೇನೆ ಎಂದಿದ್ದರು. ಆದರೆ ಈಗ ಸಲ್ಮಾನ್ ಖಾನ್ಗಿಂತಲೂ ಬಿಷ್ಣೋಯಿ ಮೇಲು ಎಂದು ಹೇಳಿದ್ದಾರೆ.