ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಮೊದಲ ಬಾರಿಗೆ ಮಗಳ ಫೋಟೋ ರಿವೀಲ್ ಮಾಡಿದ್ದಾರೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಗಳ ಕಾಲಗಳ ಫೋಟೋ ಶೇರ್ ಮಾಡಿರುವ ದಂಪತಿ ಹೆಸರನ್ನು ರಿವೀಲ್ ಮಾಡಿದ್ದಾರೆ.
ಸೆ.8ರಂದು ದೀಪಿಕಾ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ಆದರೆ, ಪೋಟೋವನ್ನು ದೀಪಿಕಾ ದಂಪತಿ ಎಲ್ಲೂ ಹಂಚಿಕೊಂಡಿರಲಿಲ್ಲ. ಈಗ ಮಗಳ ಕಾಲಿನ ಫೋಟೋ ಶೇರ್ ಮಾಡಿದ್ದು ಮಗುವಿಗೆ ‘ದುವಾ’ ಎಂದು ಹೆಸರಿಟ್ಟಿದ್ದಾಗಿ ಹೇಳಿಕೊಂಡಿದ್ದಾರೆ.
ಮಗಳಿಗೆ ಇಟ್ಟಿರುವ ದುವಾ ಹೆಸರಿನ ಅರ್ಥವನ್ನು ದಂಪತಿ ತಿಳಿಸಿದ್ದಾರೆ. ದುವಾ ಎಂದರೆ ಪ್ರಾರ್ಥನೆ ಎಂದರ್ಥವಾಗಿದೆ. ಯಾಕೆಂದರೆ ನಮ್ಮ ಪ್ರಾರ್ಥನೆಗೆ ಅವಳು ಉತ್ತರ ಎಂದು ನಟಿ ಬರೆದುಕೊಂಡಿದ್ದಾರೆ.
2015 ರಲ್ಲಿ ರಣವೀರ್ ಸಿಂಗ್ ಜೊತೆ ದೀಪಿಕಾ ಇಟಲಿಯಲ್ಲಿ ಹಸೆಮಣೆ ಏರಿದರು. ಹಲವು ವರ್ಷಗಳ ಪ್ರೀತಿಸಿ ಮದುವೆಯಾಗಿದ್ದ ಜೋಡಿ ಮದುವೆಯಾದ 9 ವರ್ಷಗಳ ಬಳಿಕ ಮಗಳನ್ನು ಬರ ಮಾಡಿಕೊಂಡಿದ್ದಾರೆ.