ಸರ್ಬಿಯಾದಲ್ಲಿ ನೋವಿ ಸ್ಯಾಡ್ ನ ರೈಲ್ವೇ ನಿಲ್ದಾಣದ ಪ್ರವೇಶದ್ವಾರದಲ್ಲಿ ಮೇಲ್ಛಾವಣಿ ಕುಸಿದು 14 ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಭೀಕರ ದುರಂತ ಸಂಭವಿಸಿದೆ.
ರೈಲ್ವೆ ನಿಲ್ದಾಣದ ಮೇಚ್ಚಾವಣಿ ಕುಸಿದ ಪರಿಣಾಮ ಕೆಳಗಡೆ ನಿಂತಿದ್ದ 14 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕ್ರೇನ್ಗಳು ಮತ್ತು ಬುಲ್ಡೋಜರ್ಗಳು ಡಜನ್ಗಟ್ಟಲೆ ರಕ್ಷಕರು ಮತ್ತು ನಿರ್ಮಾಣ ಕಾರ್ಮಿಕರೊಂದಿಗೆ ಅವಶೇಷಗಳ ಮೂಲಕ ಶೋಧ ಕಾರ್ಯ ನಡೆಸಿವೆ. ರಾಜಧಾನಿ ಬೆಲ್ಗ್ರೇಡ್ನ ವಾಯುವ್ಯಕ್ಕೆ ಸುಮಾರು 70 ಕಿಮೀ(40 ಮೈಲುಗಳು) ನಗರದಲ್ಲಿ 35-ಮೀಟರ್ (115-ಅಡಿ) ಉದ್ದದ ಛಾವಣಿಯ ಕುಸಿದು ದುರಂತ ಸಂಭವಿಸಿದೆ. ಸದ್ಯ ಅವಶೇಷಗಳಡಿ ಸಿಲುಕಿಕೊಂಡಿರುವವರನ್ನು ರಕ್ಷಣಾ ಸಿಬ್ಬಂದಿಗಳು ಹುಡುಕಾಟ ನಡೆಸಿದ್ದಾರೆ.