ಸ್ಯಾಂಡಲ್ವುಡ್ ಸ್ಟಾರ್ ಡೈರೆಕ್ಟರ್ ತರುಣ್ ಸುಧೀರ್ ಮತ್ತು ಸೋನಲ್ ಮಂಥೆರೋಗೆ ಇದು ಮೊದಲ ದೀಪಾವಳಿ ಆಗಿದೆ. ಮದುವೆಯಾದ ಬಳಿಕ ಬರ್ತಿರೋ ಮೊದಲ ಹಬ್ಬವನ್ನು ಸೋನಲ್ ಹಾಗೂ ತರುಣ್ ಸುಧೀರ್ ಅದ್ದೂರಿಯಾಗಿ ಸೆಲೆಬ್ರೇಟ್ ಮಾಡ್ತಿದ್ದಾರೆ.
ಹಬ್ಬದ ಸಂಭ್ರಮದರೋ ಮುದ್ದು ಜೋಡಿ ಇದೀಗ ಅಷ್ಟೇ ಮುದ್ದಾಗಿ ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ. ನವ ಜೋಡಿಯ ಫೋಟೋ ನೋಡಿದ ಪ್ರತಿಯೊಬ್ಬರು ಮೆಚ್ಚುಗೆ ಸೂಚಿಸಿದ್ದಾರೆ.
ಸೋನಲ್ ಮತ್ತು ತರುಣ್ ಮದುವೆ ಮುಂಚೆ ಒಂದು ಫೋಟೋ ಶೂಟ್ ಮಾಡಿಸಿದ್ದರು. ವಿಶೇಷವಾಗಿ ಇದನ್ನ ಥಿಯೇಟರ್ನಲ್ಲಿಯೇ ಶೂಟ್ ಮಾಡಿಸಿದ್ದರು. ಇಬ್ಬರು ಕ್ರಿಯೇಟಿವಿಟಿಗೆ ಪ್ರತಿಯೊಬ್ಬರು ಮೆಚ್ಚುಗೆ ಸೂಚಿಸಿದ್ದರು. ಇದೀಗ ದೀಪಾವಳಿ ಹಬ್ಬಕ್ಕೆ ಮಾಡಿಸಿರೋ ಈ ಒಂದು ಫೋಟೋ ಶೂಟ್ ತುಂಬಾನೆ ಸ್ಪೆಷಲ್ ಆಗಿದೆ.
ಸೋನಲ್ ಹಾಗೂ ತರುಣ್ ಸುಧೀರ್ ಇಲ್ಲಿ ವಿಶೇಷ ಕಾಸ್ಟೂಮ್ ಹಾಕಿದ್ದಾರೆ. ಲೈಟ್ ಕಲರ್ ಡ್ರೆಸ್ ನಲ್ಲಿ ಇಬ್ಬರು ಸಖತ್ತಾಗೇ ಮಿಂಚಿದ್ದಾರೆ. ಇಬ್ಬರೂ ಒಂದೇ ಬಣ್ಣದ ಡ್ರೆಸ್ ತೊಟ್ಟಿರೋದರಿಂದಲೇ ನವ ಜೋಡಿ ಮತ್ತಷ್ಟು ಸುಂದರವಾಗಿ ಕಾಣಿಸಿಕೊಂಡಿದ್ದಾರೆ.
ಸೋನಲ್ ಮತ್ತು ತರುಣ್ ಸುಧೀರ್ ಡ್ರೆಸ್ ಮೇಲೆ ವಿಶೇಷ ಡಿಸೈನ್ ಕೂಡ ಇವೆ. ಈ ಡಿಸೈನ್ ಬಟ್ಟೆಯ ತೋಳು ಹಾಗೂ ಭುಜದ ಮೇಲೂ ಇರೋದು ಸ್ಪೆಷಲ್ ಆಗಿಯೇ ಕಾಣಿಸುತ್ತಿದೆ. ಹಾಗೇ ಇಡೀ ಸಿಂಪಲ್ ಕಲರ್ ಡ್ರೆಸ್ನಲ್ಲಿ ಈ ಡಿಸೈನ್ ತುಂಬಾನೆ ಆಕರ್ಷಕವಾಗಿಯೇ ಕಾಣಿಸುತ್ತಿದೆ.
ಸೋನಲ್ ಮತ್ತು ತರುಣ್ ಸುಧೀರ್ ಮದುವೆ ಆಗಿ ಈಗ ಮೂರೇ ಮೂರು ತಿಂಗಳು ಕಳೆದಿವೆ. ಈ ಮೂರು ತಿಂಗಳಲ್ಲಿ ನೆಚ್ಚಿನ ದೇಶಕ್ಕೂ ಈ ಜೋಡಿ ಹನಿಮೂನ್ಗೂ ಹೋಗಿ ಬಂದಿದೆ. ಇಲ್ಲಿಯ ಸುಂದರ ತಾಣಗಳಲ್ಲೂ ಸುತ್ತಾಡಿ ಖುಷಿ ಪಟ್ಟಿದೆ. ಒಂದಷ್ಟು ಫೋಟೋ ಮತ್ತು ವಿಡಿಯೋಗಳನ್ನೂ ಕೂಡ ತೆಗೆದುಕೊಂಡು ಬಂದಿದೆ.
ಆಗಸ್ಟ್ 11 ರಂದು ಬೆಂಗಳೂರಿನಲ್ಲಿಯೇ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಅದಾಗಿ ಒಂದು ತಿಂಗಳು ಅಂದ್ರೆ, ಸೆಪ್ಟೆಂಬರ್ 1 ರಂದುಮತ್ತೊಮ್ಮೆ ಕ್ರೈಸ್ತ ಸಂಪ್ರದಾಯದಂತೆ ಮಂಗಳೂರಿನ ಚರ್ಚ್ ನಲ್ಲಿ ವಿವಾಹವಾದರು.
ತರುಣ್ ಸುಧೀರ್ ಹಾಗೂ ಸೋನಲ್ ಸದ್ಯ ದೀಪಾವಳಿ ಹಬ್ಬದ ಖುಷಿಯಲ್ಲಿಯೇ ಇದ್ದಾರೆ. ಮದುವೆ ಬಳಿಕ ಸೆಲೆಬ್ರೇಟ್ ಮಾಡ್ತಿರೋ ಮೊದಲ ದೀಪಾವಳಿ ಇವರದಾಗಿದೆ. ಹಾಗಾಗಿಯೇ ಇದು ಸ್ಪೆಷಲ್ ದೀಪಾವಳಿಯಾಗಿದೆ.
ದೀಪಾವಳಿ ಫೋಟೋಗಳನ್ನ ಸೋನಲ್ ಮಂಥೆರೋ ತಮ್ಮ ಅಧಿಕೃತ ಪೇಜ್ನಲ್ಲಿಯೇ ಹಂಚಿಕೊಂಡಿದ್ದಾರೆ. ಈ ಮೂಲಕ ದೀಪಾವಳಿ ಮತ್ತು ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನ ಕೂಡ ತಿಳಿಸಿದ್ದಾರೆ.