ಕೆ.ಆರ್.ಪುರ: ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಅಚರಿಸುವುದು ಮತ್ತು ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಸಂಸ್ಕೃತಿ, ಕಲೆ, ಭಾಷೆ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಬೆಂ.ಪೂ.ತಾಲ್ಲೂಕು ತಹಶಿಲ್ದಾರ್ ರಾಜೀವ್ ತಿಳಿಸಿದರು.
ಕೆ.ಆರ್.ಪುರ ತಾಲೂಕು ಕಚೇರಿಯಲ್ಲಿ ಏರ್ಪಡಿಸಿದ್ದ 69ನೇ ಕನ್ನಡ ರಾಜ್ಯೋತ್ಸವವನ್ನು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಹಾರ ಹಾಕುವ ಮೂಲಕ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ನಂತರ ಮಾತನಾಡಿದ ಅವರು ಬೇರೆ ಭಾಷೆಗಳಿಗಿಂತ ಕನ್ನಡ ಭಾಷೆ ತುಂಬಾನೇ ಶ್ರೀಮಂತ ಪ್ರಾಚೀನ. ಕನ್ನಡ ನುಡಿ ಆಡುವುದೇ ಒಂದು ರೀತಿಯ ಖುಷಿ. ಈ ಭಾಷೆಯಲ್ಲಿರುವಷ್ಟು ಪ್ರೌಢಿಮೆ, ಸಂಸ್ಕೃತಿ, ಮಹತ್ವ ಬೇರೆ ಯಾವ ಭಾಷೆಯಲ್ಲೂ ಸಿಗದು. ಹಾಗಾಗಿ, ಎಲ್ಲಾ ಭಾಷೆಗಳಿಗೆ ಹೋಲಿಸಿದರೆ ಕನ್ನಡಕ್ಕೆ ತನ್ನದೇ ಆದ ವೈಶಿಷ್ಟ್ಯ ಮತ್ತು ಇತಿಹಾಸ ಇದೆ. ಕನ್ನಡ ನಾಡು ಮತ್ತಷ್ಟು ಬಲಿಷ್ಠವಾಗಿಸೋಣ. ನಾಡು, ನುಡಿಗೆ ಧಕ್ಕೆ ಬಂದರೆ ಕನ್ನಡಿಗರೆಲ್ಲಾರು ಸಂಘಟಿತರಾಗಿ ಹೋರಾಟ ಮಾಡಬೇಕು ಎಂದುರು.
ಎಲ್ಲಾ ಕಡೆ ಬಳಸುವುದರ ಮೂಲಕ ಕನ್ನಡ ನುಡಿಯನ್ನು ಹೆಚ್ಚು ಪ್ರಚಲಿತಗೊಳಿಸಿ ನಮ್ಮತನವನ್ನು ಮೆರೆಯಬೇಕು. ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎನ್ನುವ ರಾಷ್ಟ್ರ ಕವಿ ಕುವೆಂಪು ವಾಣಿಯು ನಮ್ಮ ಪ್ರತಿ ನಿತ್ಯದ ಸ್ಮರಣೆಯಾಗಬೇಕು ಎಂದರು.
ಇಂದು ನಮ್ಮ ತಾಲ್ಲೂಕು ಕಚೇರಿಯಲ್ಲಿ ನಾಡಹಬ್ಬ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಚರಣೆಗೆ ಸಿಬ್ಬಂದಿ ಹಾಜರಾಗದಿದ್ದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರಯಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಬಂದಿದ್ದ ಕನ್ನಡಪರ ಸಂಘಟನೆಗಾರರು ನಮ್ಮ ಕ್ಷೇತ್ರದ ಕೆರೆಗಳನ್ನ ಒತ್ತುವರಿಯಾಗಿರುವ ಮತ್ತು ಅದನ್ನ ತೆರವು ಮಾಡಿಸುವ ಬಗ್ಗೆ ಹಾಗೂ ಪುಟ್ ಪಾತ್ ಅತಿಕ್ರಮಣ, ರಸ್ತೆಗಳ ಪಕ್ಕ ಕಸ ವಿಂಗಡಣೆಯ ದುರ್ನಾತ ಬಗ್ಗೆ ತಹಶಿಲ್ದಾರ್ ಗಮನಕ್ಕೆ ತಂದರು.
ಕಾರ್ಯಕ್ರಮಕ್ಕೆ ಕನ್ನಡ ಸಂಘಟನೆಗಳ ಕೃಷ್ಣಮೂರ್ತಿ, ಎಲ್ ಐಸಿ ವೆಂಕಟೇಶ್ , ಕಚೇರಿಯ ಮಲ್ಲಿಕಾರ್ಜುನ್ ಮತ್ತಿತರರಿದ್ದರು.