ಬೆಂಗಳೂರು: ರೈತರ ಭೂಮಿಯನ್ನ ವಕ್ಫ್ ಬೋರ್ಡ್ ಕಬಳಿಸುತ್ತಿದೆ ಎನ್ನುವ ರಾಜ್ಯದ ಹಲವು ಜಿಲ್ಲೆಗಳ ರೈತರ ಆರೋಪ ಇದೀಗ ತೀವ್ರ ಸ್ವರೂಪಕ್ಕೆ ತಿರುಗಿದೆ. ಬಿಜೆಪಿ ಇದನ್ನೇ ಅಸ್ತ್ರ ಮಾಡಿಕೊಂಡು ಸರ್ಕಾರದ ವಿರುದ್ಧ ಹರಿಹಾಯ್ತಿದ್ರೆ. ಅತ್ತ ಕಾಂಗ್ರೆಸ್ ಕೂಡಾ ಬಿಜೆಪಿ ಅವಧಿಯಲ್ಲಿ ರೈತರಿಗೆ ನೀಡಿದ್ದ ನೋಟಿಸ್ ದಾಖಲೆಯನ್ನ ಬಿಟ್ಟು ತಿರುಗೇಟು ಕೊಟ್ಟಿದೆ. ಈ ಮಧ್ಯೆ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಅವರು ವಕ್ಫ್ ಗೆ ಸೇರಿದ ಪ್ರತಿ ಇಂಚು ಜಮೀನು ವಾಪಸ್ಸು ಪಡೆಯುವ ಬಗ್ಗೆ ಮಾತಾಡಿದ ವಿಡಿಯೋವನ್ನು ಜಮೀರ್ ತೋರಿಸಿದರು. 022ರಲ್ಲಿ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ, ವಕ್ಫ್ ಬೋರ್ಡ್ ವಿಚಾರದಲ್ಲಿ ಆಡಿದ್ದ ಮಾತುಗಳು.
ಮುಸ್ಲಿಂ ಸಮುದಾಯದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಬೊಮ್ಮಾಯಿ, ವಕ್ಫ್ ಬೋರ್ಡ್ ಆಸ್ತಿಯನ್ನು ಉಳಿಸಿಕೊಳ್ಳಿ. ಎಲ್ಲವನ್ನೂ ಊಪರ್ ವಾಲ (ದೇವರು) ನೋಡುತ್ತಿರುತ್ತಾನೆ ಎನ್ನುವ ಭಾಷಣವನ್ನು ಬೊಮ್ಮಾಯಿ ಮಾಡಿದ್ದರು. ಬೊಮ್ಮಾಯಿ ಯಾಕಾಗಿ ತಮ್ಮ ಅವಧಿಯಲ್ಲಿ ಆ ಮಾತನ್ನು ಹೇಳಿದ್ದರು ಎಂದು ಜಮೀರ್, ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದಾರೆ.
“ವಕ್ಫ್ ಆಸ್ತಿ ಅಲ್ಲಾನದ್ದು, ಅದನ್ನು ಕಾಪಾಡಿಕೊಳ್ಳುವುದು ನಿಮ್ಮ ಡ್ಯೂಟಿ, ಅದನ್ನು ಮರಳಿ ಪಡೆಯಲು ಯಾವುದೇ ಕಾಂಪ್ರಮೈಸ್ ಮಾಡಿಕೊಳ್ಳಬೇಡಿ. ಕಾಂಪ್ರಮೈಸ್ ಮಾಡಿಕೊಂಡರೆ ನಾವೇನೂ ಮಾಡಲು ಸಾಧ್ಯವಾಗುವುದಿಲ್ಲ. ಊಪರ್ ವಾಲಾ ಎಲ್ಲವನ್ನೂ ನೋಡುತ್ತಿರುತ್ತಾನೆ ” ಎಂದು ಆ ಸಭೆಯಲ್ಲಿ ಹೇಳಿದ್ದಾರೆ.
2022ರಲ್ಲಿ ನಗರದ ಕೆಎಂಡಿಸಿ ಕಚೇರಿಯನ್ನು ಉದ್ಘಾಟಿಸಿ ಸಿಎಂ ಆಗಿದ್ದ ಬೊಮ್ಮಾಯಿ ಮಾತನಾಡುತ್ತಾ, ” ಅದು ಖುದಾನ ಆಸ್ತಿ, ಅದನ್ನು ಲೂಟಿ ಹೊಡೆದಾಗ ನೀವು ಕಣ್ಣುಮುಚ್ಚಿ ಸುಮ್ಮನೆ ಕೂತರೆ, ವಕ್ಫ್ ಆಸ್ತಿಯನ್ನು ಲೂಟಿ ಮಾಡಿದವರಿಗಿಂತ ಜಾಸ್ತಿ, ನೀವು ತಪ್ಪಿತಸ್ಥರಾಗುತ್ತೀರಿ” ಎಂದು ಬೊಮ್ಮಾಯಿ ಹೇಳಿದ್ದರು.
ಕನ್ನಡ ಮತ್ತು ಹಿಂದಿ ಮಿಶ್ರಿತವಾಗಿ ಬೊಮ್ಮಾಯಿ ಮಾತನಾಡಿದ್ದ ವಿಡಿಯೋವನ್ನು ವಿಜಯಪುರದಲ್ಲಿ ಪ್ರದರ್ಶಿಸಿದ ಸಚಿವ ಜಮೀರ್ ಅಹ್ಮದ್, ” ಬಿಜೆಪಿಯವರಿಗೆ ವಿರೋಧ ಮಾಡಲು ಏನಾದರೂ ಒಂದು ವಿಚಾರ ಬೇಕು, ಅದಕ್ಕೆ ಈಗ ವಕ್ಫ್ ವಿಚಾರವನ್ನು ತೆಗೆದುಕೊಂಡಿದ್ದಾರೆ. ಹಿಂದೆ, ಬೊಮ್ಮಾಯಿಯವರೇ ವಕ್ಫ್ ನಲ್ಲಿ ಅತಿಕ್ರಮಣ ಆಗುತ್ತಿದೆ. ಬೊಮ್ಮಾಯಿ ಯಾಕಾಗಿ ಈ ಮಾತನ್ನು ಹೇಳಿದರು” ಎಂದು ಜಮೀರ್ ಪ್ರಶ್ನಿಸಿದ್ದಾರೆ.