ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಹೊರ ಬಂದಿರುವ ದರ್ಶನ್ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೊನ್ನೆ ದಾಸನಿಗೆ ಟೆಸ್ಟ್ಗಳ ಮೇಲೆ ಟೆಸ್ಟ್ಗಳನ್ನ ಮಾಡಿದ್ದ ವೈದ್ಯರು, ಸದ್ಯ ರಿಪೋರ್ಟ್ಗಾಗಿ ಕಾಯ್ತಿದ್ದಾರೆ. ಮತ್ತೊಂದ್ಕಡೆ, ಸಖತ್ ಅಲರ್ಟ್ ಆಗಿರೋ ಪೊಲೀಸರು ಕೊಲೆ ಪ್ರಕರಣದ ಸಾಕ್ಷ್ಯಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.
ಆಸ್ಪತ್ರೆಗೆ ದಾಖಲಾಗಿರುವ ದರ್ಶನ್ ನ ಹಿರಿಯ ನರ ರೋಗ ತಜ್ಞ ಡಾ.ನವೀನ್ ಹಾಗೂ ತಂಡ ಎಕ್ಸಾಮಿನೇಷನ್ ಮಾಡ್ತಿದೆ. ಬೆನ್ನು ನೋವು ಹಿನ್ನಲೆ ದರ್ಶನ್ಗೆ ಎಕ್ಸ್ರೇ, MRI ಸ್ಕ್ಯಾನ್ ಸೇರಿದಂತೆ ಏಳು ರೀತಿಯ ಟೆಸ್ಟ್ಗಳನ್ನ ಮಾಡಲಾಗಿದೆ. ಇಂದು ದರ್ಶನ್ ಹೆಲ್ತ್ ರಿಪೋರ್ಟ್ ವೈದ್ಯರ ಕೈ ಸೇರಲಿದ್ದು, ದರ್ಶನ್ಗೆ ಸರ್ಜರಿ ಮಾಡ್ಬೇಕಾ ಅಥವಾ ಫಿಸಿಯೋಥೆರಪಿ ಸಾಕಾ ಅನ್ನೋ ನಿರ್ಧಾರ ಮಾಡಲಿದ್ದಾರೆ.
ದರ್ಶನ್ ಕುಟುಂಬ ಸಹ ಸರ್ಜರಿಯನ್ನ ಲಾಸ್ಟ್ ಆಕ್ಷನ್ ಆಗಿ ಇಟ್ಕೊಂಡಿದ್ದು, ವೈದ್ಯರ ಸಲಹೆ ಕೇಳಿ ಚಿಕಿತ್ಸೆ ಮುಂದಾಗಲಿದ್ದಾರೆ ಅನ್ನೊ ಮಾಹಿತಿ ಇದೆ. ಅತ್ತ, ಬಿಜಿಎಸ್ ಆಸ್ಪತ್ರೆ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಆಸ್ಪತ್ರೆಗೆ ಬರುವವರ, ಹೋಗುವವರ ಮಾನಿಟರ್ ಮಾಡ್ಲಾಗ್ತಾಯಿದ್ದು, ದರ್ಶನ್ ಇರೋ ರೂಮ್ನ CCTV ಮಾನಿಟರ್ ಮಾಡ್ತಿದ್ದಾರೆ ಅನ್ನೋ ಮಾಹಿತಿ ಇದೆ. ಅಷ್ಟಲ್ಲದೇ, ದರ್ಶನ್ ಚಲನವಲನದ ಮೇಲೂ ಪೊಲೀಸರು ಕಣ್ಣಿಟ್ಟಿದ್ದಾರೆ. ಕೇವಲ ದರ್ಶನ್ ಮೇಲಲ್ಲ.. ಕೊಲೆ ಕೇಸ್ನ ಸಾಕ್ಷ್ಯಗಳ ಜೊತೆಯೂ ಪೊಲೀಸರು ನಿರಂತರ ಸಂಪರ್ಕ ಇಟ್ಟಿದ್ದಾರೆ.
ಕೊಲೆ ಕೇಸ್ ನ ಮೂವರು ಐ ವಿಟ್ನೇಸ್ ಸೇರಿ ಬಹುತೇಕರು ಬೆಂಗಳೂರಿನವರೇ ಆಗಿದ್ದಾರೆ. ದರ್ಶನ್ ವಾಸವಿರೋ R.R ನಗರದ ಸುತ್ತಮುತ್ತ ಕೆಲವರು ವಾಸ ಮಾಡ್ತಿದ್ದು, ಹೀಗಾಗಿ ಸಾಕ್ಷಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ದರ್ಶನ್ ಹೊರಬಂದಿರೋದ್ರಿಂದ ಯಾವುದೇ ಸಾಕ್ಷ್ಯಗಳು ಭಯಪಡಬಾರದು, ಆರೋಪಿ ಪ್ರಭಾವಕ್ಕೆ ಒಳಗಾಗಬಾರ್ದು, ಮುಖ್ಯವಾಗಿ ಕೋರ್ಟ್ನಲ್ಲಿ ಟ್ರಯಲ್ ವೇಳೆ ಸಾಕ್ಷ್ಯ ಉಲ್ಟಾ ಹೊಡೆಯಬಾರದು.
ಈ ಎಲ್ಲಾ ಕಾರಣದಿಂದ ದರ್ಶನ್ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಅತ್ತ, ದರ್ಶನ್, ಸಹಚರರು ಸಂಪರ್ಕ ಮಾಡಿದ್ರೆ ನಮ್ಮ ಗಮನಕ್ಕೆ ತರಬೇಕು ಎಂದು ಸಾಕ್ಷ್ಯಗಳಿಗೆ ಪೊಲೀಸರು ಸೂಚನೆ ಕೊಟ್ಟಿದ್ದಾರೆ. ಅಲರ್ಟ್ ಆಗಿರುವ ಪೊಲೀಸರು, ಒಂದ್ಕಡೆ ದರ್ಶನ್ ಮೇಲೆ ಒಂದು ಕಣ್ಣಿಟ್ಟಿದ್ರೆ, ಮತ್ತೊಂದ್ಕಡೆ, ಸಾಕ್ಷ್ಯಗಳ ಮೇಲೂ ಹದ್ದಿನ ಕಣ್ಣಿಟ್ಟೂ ಕೂತಿದ್ದಾರೆ. ಸದ್ಯಕ್ಕೆ ದರ್ಶನ್ ಹೆಲ್ತ್ ರಿಪೋರ್ಟ್ ನಾಳೆ ವೈದ್ಯರ ಕೈ ಸೇರಲಿದ್ದು, ಸರ್ಜರಿ ಬಗ್ಗೆ ನಾಳೆ ತೀರ್ಮಾನವಾಗಲಿದೆ.