ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಾದನಾಯಕಹಳ್ಳಿ ಯಲ್ಲಿಇರೋ ಅಪಾರ್ಟ್ಮೆಂಟ್ನಲ್ಲಿ ನೇಣಿಗೆ ಶರಣಾಗಿದ್ದಾರೆ. ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು ಗುರುಪ್ರಸಾದ್ ನಿಧನ ಪ್ರತಿಯೊಬ್ಬರಿಗೂ ಶಾಕ್ ನೀಡಿದೆ.
ನಾನು ರಂಗನಾಯಕ ಸಿನಿಮಾಗೆ ಗುರುಪ್ರಸಾದ್ಗೆ ಬರೋಬ್ಬರಿ 90 ಲಕ್ಷ ಕೊಡಿಸಿದ್ದೆ. ಸಿನಿಮಾದಿಂದ ಬಂದ ಹಣದಿಂದ ಉತ್ತಮ ಜೀವನ ಕಟ್ಟಿಕೊಳ್ಳಬಹುದಿತ್ತು. ಆದರೆ, ಕುಡಿತದ ಚಟದಿಂದ ಜೀವನವನ್ನೇ ಹಾಳು ಮಾಡಿಕೊಂಡ. ಆತನ 2ನೇ ಹೆಂಡತಿ ಗರ್ಭಿಣಿ, ಒಂದು ಹೆಣ್ಣುಮಗು ಕೂಡ ಇದೆ. ನಾನು ಆ ಹೆಣ್ಣು ಮಗುವಿನ ಭವಿಷ್ಯಕ್ಕೆ ಸಹಾಯ ಮಾಡುತ್ತೇನೆ ಎಂದರು.
ಗುರುಪ್ರಸಾದ್ ನನಗೆ ಮಠ ಹಾಗೂ ಎದ್ದೇಳು ಮಂಜುನಾಥ ಅನ್ನೋ ಸೂಪರ್ ಹಿಟ್ ಸಿನಿಮಾಗಳು ನೀಡಿದ್ರು. ರಂಗನಾಯಕ ಸಿನಿಮಾದ ಬಳಿಕ ನನ್ನ ಮತ್ತು ಗುರುಪ್ರಸಾದ್ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ನಮ್ಮಿಬ್ಬರ ಮಧ್ಯೆ ಮಾತು ಅಷ್ಟಕ್ಕಷ್ಟೇ ಇತ್ತು ಎಂದರು.
ಸಿನಿಮಾದಲ್ಲಿ ನಟಿಸಲು ಬಂದ ಹುಡುಗಿಯನ್ನೇ ಮದುವೆ ಆದ. ಈಗ ಆತನ ಗರ್ಭಿಣಿ ಹೆಂಡತಿ ಹಾಗೂ ಹೆಣ್ಣು ಮಗುವನ್ನು ನೋಡಿದರೆ ಬೇಜಾರಾಗುತ್ತದೆ. ನಾನು ಆ ಹೆಣ್ಣು ಮಗುವಿನ ಭವಿಷ್ಯಕ್ಕೆ ಸಹಾಯ ಮಾಡುವ ಸಂಕಲ್ಪ ತೊಟ್ಟಿದ್ದೇನೆ ಎಂದಿದ್ದಾರೆ.
ಗುರುಪ್ರಸಾದ್ ಬರೋಬ್ಬರಿ 3 ಕೋಟಿ ರೂಪಾಯಿ ಸಾಲ ಮಾಡಿಕೊಂಡಿದ್ದರು. ಸಾಲದ ಹೊರೆ ತಾಳಲಾರದೆ ಆಗಾಗ ತನ್ನ ಮನೆ ಬದಲಾವಣೆ ಮಾಡುತ್ತಿದ್ದರು. ಇವರ ವಿರುದ್ಧ ಹಲವು ಚೆಕ್ ಬೌನ್ಸ್ ಪ್ರಕರಣ ಕೂಡ ದಾಖಲಾಗಿದ್ದವು. ರಂಗನಾಯಕ ಸಿನಿಮಾ ಕೂಡ ಸೋತಿತ್ತು. ಈ ಕಾರಣದಿಂದಲೇ ಗುರುಪ್ರಸಾದ್ ನೇಣಿಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.