ಕಲಘಟಗಿ: ತಾಲ್ಲೂಕಿನ ಬಿಸರಳ್ಳಿ ಗ್ರಾಮದ ಬಸ್ ನಿಲ್ದಾಣ ಸಮೀಪದ ಕೆರೆಯಲ್ಲಿ ಹಸುವಿನ ಮೈತೊಳೆಯಲು ತೆರಳಿದ್ದ ಬಾಲಕ ನೀರಿನಲ್ಲಿ ಮುಳುಗಿ ಅಜ್ಜಯ್ಯ ಮೃತಪಟ್ಟಿದ್ದಾನೆ. ಗ್ರಾಮದ ಅಜ್ಜಯ್ಯ ಹಿರೇಮಠ (15) ಮೃತಪಟ್ಟ ಬಾಲಕ. ದೀಪಾವಳಿ ಹಬ್ಬದ ಅಂಗವಾಗಿ ಅಜ್ಜಯ್ಯ ಹಸುವಿನ ಮೈತೊಳೆಯಲು ಕೆರೆಗೆ ಹೋಗಿದ್ದ ವೇಳೆ ಅವಘಡ ಸಂಭವಿಸಿದ್ದು,
ಅಗ್ನಿ ಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಮೃತದೇಹವನ್ನು ಹೊರತೆಗೆದರು. ಅಜ್ಜಯ್ಯ ಗ್ರಾಮದ ಸರ್ಕಾರಿ ಶಾಲೆಯಲ್ಲಿ 9 ನೇ ತರಗತಿ ಓದುತ್ತಿದ್ದ. ದೀಪಾವಳಿ ಹಬ್ಬದ ಸ೦ಭ್ರಮದಲ್ಲಿದ್ದ ಕುಟುಂಬಸ್ಥರಲ್ಲಿ ದು ಮಡುಗಟ್ಟಿತ್ತು.
‘ಕೆರೆ ರಸ್ತೆ ಪಕ್ಕ ಇದ್ದು, ಸುತ್ತಲೂ ತಡೆ ಗೋಡೆ ಹಾಗೂ ರಕ್ಷಣೆ ಇಲ್ಲ. ಎಲ್ಲೆಂದರಲ್ಲಿ ನೀರಿನಲ್ಲಿ ಇಳಿಯುತ್ತಾರೆ. ಮಳೆಗೆ ಕೆರೆ ತುಂಬಿ ಕೆರೆಯ ಒಡ್ಡು ಅಲ್ಲಲ್ಲಿ ಒಡೆದಿದೆ. ಅಧಿಕಾರಿಗಳು ಗಮನಹರಿಸಿ, ಕೆರೆಯ ಸುತ್ತ ತಡೆಗೋಡೆ ನಿರ್ಮಿಸಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದರು.