ಬೆಂಗಳೂರು:- ಕೇವಲ ಭಾವನಾತ್ಮಕ ವಿಷಯಗಳ ಮೇಲೆ ಮಾತ್ರ ಬಿಜೆಪಿ ಪ್ರತಿಭಟನೆ ಮಾಡುತ್ತದೆ ಎಂದು ಸಚಿವ HC ಮಹದೇವಪ್ಪ ವ್ಯಂಗ್ಯವಾಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ವಕ್ಫ್ ವಿಚಾರದಲ್ಲಿ ಬಿಜೆಪಿ ಪ್ರತಿಭಟನೆ ರಾಜಕೀಯ ಪ್ರೇರಿತ.
ಬಿಜೆಪಿ ಪ್ರತಿಭಟನೆ ರಾಜಕೀಯ ಪ್ರೇರಿತ ಪ್ರತಿಭಟನೆ. ಸಿಎಂ ಅವರೇ ನೋಟಿಸ್ ವಾಪಸ್ ಪಡೆಯೋಕೆ ಹೇಳಿದ್ದಾರೆ. ಅಲ್ಲಿಗೆ ವಿಷಯ ಮುಗಿದಿದೆ. ಬಿಜೆಪಿಯವರು ಇದ್ದಾಗಲೇ ನೋಟಿಸ್ ಕೊಟ್ಟಿದ್ದರು. ಬಿಜೆಪಿಯವರಿಗೆ ಇಷ್ಟು ಕಾಳಜಿ ಇದ್ದರೆ ಅವತ್ತೇ ಈ ವಿಷಯ ಸರಿ ಮಾಡಬಹುದಿತ್ತು. ಅವರು ಮಾಡದೇ ಈಗ ಸರಿ ಮಾಡಿ ಎಂದರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ.
ರೈತರಿಗೆ ಯಾವುದೇ ತೊಂದರೆ ಆಗಬಾರದು. ನಮ್ಮ ಸರ್ಕಾರ ಯಾರಿಗೂ ತೊಂದರೆ ಕೊಡೋದಿಲ್ಲ. ಪಹಣಿಗೆ ಎಲ್ಲಾ ಇತಿಹಾಸ ಇರುತ್ತದೆ. ಅದನ್ನು ನೋಡಿದ್ರೆ ಗೊತ್ತಾಗುತ್ತದೆ. ರೆಕಾರ್ಡ್ ಇರೋ ಪ್ರಕಾರ ಆಗುತ್ತದೆ. ರೈತರನ್ನ ಒಕ್ಕಲು ಎಬ್ಬಿಸಬಾರದು ಎಂದು ಸಿಎಂ ಹೇಳಿದ್ದಾರೆ. ಬಿಜೆಪಿಯವರು ಯಾವತ್ತು ಇಶ್ಯು ಮೇಲೆ ದೇಶದಲ್ಲಿ ಹೋರಾಟ ಮಾಡಿಯೇ ಇಲ್ಲ. ಸೂಕ್ಷ್ಮ ವಿಷಯ, ಭಾವನಾತ್ಮಕ ವಿಷಯಗಳ ಮೇಲೆ ಪ್ರತಿಭಟನೆ ಮಾಡುತ್ತಾರೆ ಎಂದು ಕಿಡಿಕಾರಿದ್ದಾರೆ.