ಶೀತ, ಕೆಮ್ಮು, ಜ್ವರ, ತಲೆನೋವು, ಆಯಸಿಡಿಟಿ, ಮಲಬದ್ಧತೆ, ಮೈ-ಕೈ ನೋವು ಹೀಗೆ ಏನೇ ಸಮಸ್ಯೆಗಳು ಎದುರಾದರೂ ಜನರು ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಪ್ರಾರಂಭವಾದ ಕೂಡಲೆ ಮಾತ್ರೆಗಳನ್ನು ಸೇವಿಸುತ್ತಾರೆ. ಅದರಲ್ಲೂ ಕರೋನಾ ಸಾಂಕ್ರಾಮಿಕ ಸಮಯದಲ್ಲಿ ಭಾರತೀಯ ಬ್ರಾಂಡ್ ಡೋಲೋ 650 ದೇಶದ ಅತ್ಯಂತ ಜನಪ್ರಿಯ ಔಷಧಿಯಾಗಿ ಹೊರಹೊಮ್ಮಿದೆ.
ಇದು ದೇಶದಲ್ಲೇ ಹೆಚ್ಚು ಮಾರಾಟವಾಗುವ ಔಷಧಿ ಎನಿಸಿಕೊಂಡಿದೆ. ಡೊಲೊ 650 ಮಾತ್ರ ಒಂದರಿಂದ 5.7 ಶತಕೋಟಿ ರೂಪಾಯಿಗಳ ಆದಾಯ ಗಳಿಸಿದೆ.
ಡೋಲೋ 650 ಮಾತ್ರೆ ಹೆಚ್ಚಾಗಿ ಸೇವಿಸುವ ಮುನ್ನ ಎಚ್ಚರ
ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಕೊರೊನಾ ಡೋಲೋ 650 ಮಾತ್ರೆ ಸೇವನೆ ಮಾಡುವುದು ಕೂಡ ಆರೋಗ್ಯಕ್ಕೆ ಬಹಳ ಅಪಾಯಕಾರಿಯಾಗಿದೆ.. ಕೊರೊನಾ ರೋಗ ಕಾಣಿಸಿಕೊಂಡವರಿಗೂ ವೈದ್ಯರು ಕೂಡ ಪ್ಯಾರಾಸಿಟಮಾಲ್ ಔಷಧಿಯಾದ ಡೋಲೋ 650 ಮಾತ್ರೆಯನ್ನು ಸೇವಿಸಲು ಸೂಚಿಸಿದರು.. ಹೀಗಾಗಿಯೇ ಜನರು ಸಾಂಕ್ರಮಿಕ ರೋಗದ ಸಂದರ್ಭದಲ್ಲಿ ತಮ್ಮ ಮನೆಯಲ್ಲಿ ಮುಂಜಾಗೃತಾ ಕ್ರಮವಾಗಿ ಪ್ರಾಥಮಿಕ ಚಿಕಿತ್ಸೆ ಎನ್ನುವಂತೆ ಡೋಲೋ 650 ಮಾತ್ರೆಯನ್ನು ತಂದು ಇಟ್ಟು ಕೊಂಡಿದ್ದಾರೆ..
ಕೊಂಚ ಶೀತ ನೆಗಡಿ ತಲೆನೋವು ಜ್ವರ ಕಾಣಿಸಿಕೊಂಡರು ಸಹ ಡೋಲೋ 650 ಮಾತ್ರೆ ತೆಗೆದುಕೊಳ್ಳುವ ಮೂಲಕ ರೋಗ ಗುಣಪಡಿಸಿಕೊಳ್ಳಲು ಪ್ರಯತ್ನ ಪಡುತ್ತಿದ್ದಾರೆ.. ಆದರೆ ಹೀಗೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಡೋಲೋ ಮಾತ್ರೆ ಸೇವನೆ ಮಾಡುವುದು ಬಹಳ ಅಪಾಯಕಾರಿಯಾಗಿ ಪರಿಣಮಿಸಿದೆ.
ಡೋಲೋದ ಸಾಮಾನ್ಯ ಅಡ್ಡ ಪರಿಣಾಮಗಳು
ಡೋಲೋದ ಗಂಭೀರ ಅಡ್ಡ ಪರಿಣಾಮಗಳು
ತಜ್ಞರ ಪ್ರಕಾರ, ಔಷಧಿಗಳ ಮಿತಿಮೀರಿದ ಬಳಕೆಯು ನಿರ್ದಿಷ್ಟ ಅಂಗಗಳ ಮೇಲೆ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ಗಂಭೀರ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು.