ಅಬುಧಾಬಿ: ಸಂಯುಕ್ತ ಅರಬ್ ಸಂಸ್ಥಾನದ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಝಾಯೇದ್ ಅಲ್ ನಹ್ಯಾನ್ ಅವರು ತಮ್ಮ ಹಿರಿಯ ಪುತ್ರ ಶೇಖ್ ಖಾಲಿದ್ ಅವರನ್ನು ಅಬುಧಾಬಿಯ ರಾಜಕುಮಾರನನ್ನಾಗಿ ನೇಮಕ ಮಾಡಿದ್ದಾರೆ.
ಜೊತೆಗೆ ತಮ್ಮ ಸಹೋದರ ಶೇಖ್ ಮನ್ಸೂರ್ ಬಿನ್ ಝಾಯೇದ್ ಅಲ್ ನಹ್ಯಾನ್ ಹಾಗೂ ಶೇಖ್ ಮೊಹಮ್ಮದ್ ಬಿನ್ ರಾಶಿದ್ ಅಲ್ ಮಖ್ತೂಮ್ ಅವರನ್ನು ಯುಎಇಯ ಉಪಾಧ್ಯಕ್ಷರನ್ನಾಗಿ ಶೇಖ್ ಮೊಹಮ್ಮದ್ ಆಯ್ಕೆ ಮಾಡಿದ್ದಾರೆ.
ಸದ್ಯ ಯುಎಇಯ ರಾಷ್ಟ್ರೀಯ ಭದ್ರತಾ ಸಲಹೆಗಾರ ಹಾಗೂ ಎಡಿಕ್ಯೂ ಸಾರ್ವಭೌಮ ಸಂಪತ್ತು ನಿಧಿಯ ಅಧ್ಯಕ್ಷರಾಗಿರುವ ತಮ್ಮೊಬ್ಬ ಸಹೋದರ ಶೇಖ್ ತಹ್ನೌನ್ ಹಾಗೂ ಹಜ್ಜಾ ಬಿನ್ ಝಾಯೇದ್ ಅವರನ್ನು ಅಬುಧಾಬಿಯ ಉಪ ಆಡಳಿತಗಾರನನ್ನಾಗಿ ನೇಮಕ ಮಾಡಿದ್ದಾರೆ.