ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ DCC ಬ್ಯಾಂಕ್ನ ಶಾಖೆಗಳಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ಆರೋಪ ಕೇಳಿಬಂದಿತ್ತು. ಈ ಸಂಬಂಧ ಕೋಲಾರ, ಕೆಜಿಎಫ್ ಹಾಗೂ ಚಿಂತಾಮಣಿ ತಾಲೂಕುಗಳ ವ್ಯವಸ್ಥಾಪಕರನ್ನು ಅಮಾನತು ಮಾಡಲಾಗಿದೆ. ತನಿಖೆ ವೇಳೆ ಬ್ಯಾಂಕ್ನ ಮೂರು ಶಾಖೆಗಳಲ್ಲಿ 9.86 ಕೋಟಿ ಲೂಟಿ ಸಾಬೀತು ಆಗಿದೆ.
ಕೋಲಾರ ಶಾಖೆಯಲ್ಲಿ 1.50 ಕೋಟಿ,ಕೆಜಿಎಫ್ ಶಾಖೆಯಲ್ಲಿ 4.17 ಕೋಟಿ,ಚಿಂತಾಮಣಿ ಶಾಖೆಯಲ್ಲಿ 2.23 ಕೋಟಿ ದುರುಪಯೋಗ ಮಾಡಲಾಗಿದೆ.ಕೋಲಾರ ಶಾಖೆಯಲ್ಲಿ 1.50 ಕೋಟಿ ರೂ., ಕೆಜಿಎಫ್ ಶಾಖೆಯಲ್ಲಿ 4.17 ಕೋಟಿ ರೂ. ಹಾಗೂ ಚಿಂತಾಮಣಿ ಶಾಖೆಯಲ್ಲಿ 2.23 ಕೋಟಿ ರೂ. ಹಣ ದುರುಪಯೋಗವಾಗಿರುವುದು ಆಂತರಿಕ ತನಿಖೆಯಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ ವ್ಯವಸ್ಥಾಪಕರಾದ ಎಂ ಅಮರೇಶ್, ಜಿಎನ್ ಗಿರೀಶ್ ಹಾಗೂ ಜಿ ನಾಗರಾಜ್ ಎಂಬುವರ ವಿರುದ್ಧ ವಿಚಾರಣೆಯನ್ನು ಕಾಯ್ದಿರಿಸಿ ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಚಿಂತಾಮಣಿ ಹಾಗೂ ಗುಡಿಬಂಡೆ ಶಾಖೆಗಳಲ್ಲಿರುವ ಡಿಸಿಸಿ ಬ್ಯಾಂಕಿನ ಹಣ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಫ್ಐಆರ್ ದಾಖಲಾಗಿದೆ. ಬ್ಯಾಂಕಿನ ಸಿಇಒ ಸೇರಿದಂತೆ 17 ಜನರ ವಿರುದ್ಧವೂ ಪ್ರಕರಣ ದಾಖಲಾಗಿದೆ.