ಪತಿಯಿಂದ ಪತ್ನಿ ಕತ್ತು ಕೊಯ್ದು ಬರ್ಬರ ಹತ್ಯೆ ನಡೆದಿರುವ ಘಟನೆ ಜೀವನ ಭೀಮಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.
ಸಂಗೀತ ಮೃತ ದುರ್ದೈವಿ ಎನ್ನಲಾಗಿದೆ.
ಪತಿ ನಾಗರಾಜ್ ನಿಂದ ಕೃತ್ಯ ಜರುಗಿದೆ. ಪತ್ನಿ ಕತ್ತು ಕೊಯ್ದು ಬಳಿಕ ತಾನು ಕತ್ತು ಕೊಯ್ದುಕೊಂಡಿದ್ದಾರೆ. ಘಟನೆಯಿಂದ ಪತ್ನಿ ಸಾವನ್ನಪ್ಪಿದರೆ, ಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
9.30 ಸುಮಾರಿಗೆ ಈ ಘಟನೆ ಜರುಗಿದೆ. ಸ್ಥಳಕ್ಕೆ ಜೀವನ ಭೀಮಾನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಘಟನೆ ಕಾರಣ ಇನ್ನು ತಿಳಿದು ಬಂದಿಲ್ಲ. ದಂಪತಿಗೆ 4 ವರ್ಷದ ಒಂದು ಮಗು ಕೂಡ ಇದೆ. ತಮಿಳುನಾಡು ಮೂಲದ ನಾಗರಾಜ್ ಇದಾಗಿದ್ದು, ಮೃತ ಸಂಗೀತ ಚೆಲ್ಲಘಟ್ಟ ನಿವಾಸಿ ಎನ್ನಲಾಗಿದೆ.