ಬೆಂಗಳೂರು:- ರಾಜಧಾನಿ ಬೆಂಗಳೂರಿನ ಯಶವಂತಪುರ ಬಳಿ ಹೃದಯಾಘಾತದಿಂದ BMTC ಚಾಲಕ ಸಾವನ್ನಪ್ಪಿರುವ ಘಟನೆ ಜರುಗಿದೆ.
ಮೃತಪಟ್ಟ ಡ್ರೈವರ್ ನನ್ನು 39 ವರ್ಷದ ಕಿರಣ್ ಎನ್ನಲಾಗಿದೆ. ಬಸ್ನಲ್ಲಿ 50ಕ್ಕೂ ಹೆಚ್ಚು ಪ್ರಯಾಣಿಕರು ಇರುವಾಗಲೇ ಈ ದುರ್ಘಟನೆ ಸಂಭವಿಸಿದೆ.
ನೆಲಮಂಗಲ ಕಡೆಯಿಂದ ಯಶವಂತಪುರ ಕಡೆಗೆ ಬಿಎಂಟಿಸಿ ಬಸ್ ಅನ್ನು ಚಾಲನೆ ಮಾಡಿಕೊಂಡು ಬರುವಾಗ ಡ್ರೈವರ್ಗೆ ಎದೆನೋವು ಕಾಣಿಸಿಕೊಂಡಿತ್ತು. ಹೀಗಾಗಿ ತಕ್ಷಣವೇ ಬಸ್ ನಿಲ್ಲಿಸಿದ್ದನು.
ಎದೆನೋವು ತೀವ್ರವಾಗಿ ಕಾಣಿಸಿಕೊಂಡು ಹೃದಯಾಘಾತದಿಂದ ಡ್ರೈವರ್ ಸಾವನ್ನಪ್ಪಿದ್ದಾನೆ.