ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಆರೋಗ್ಯದಲ್ಲಿ ವ್ಯತ್ಯಾಸವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದ್ರೆ ಇದು ಸುಳ್ಳು ಸುದ್ದಿ. ನಟ ಶಿವರಾಜ್ ಕುಮಾರ್ ಆರೋಗ್ಯವಾಗಿದ್ದು ಯಾವುದೇ ಸಮಸ್ಯೆಯಾಗಿಲ್ಲ.ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಮನವಿ ಮಾಡಿದ್ದಾರೆ.
ಶಿವಣ್ಣನಿಗೆ ಏನೂ ಆಗಿಲ್ಲ. ಸುಮ್ನೆ ಏನೇನೋ ಸುದ್ದಿ ಹಬ್ಬಿಸಬೇಡಿ. ಸುಳ್ಳು ಸುದ್ದಿಯನ್ನ ಮೊದಲೇ ಹಬ್ಬಿಸಬೇಡಿ. ಶಿವಣ್ಣ ಪರ್ಫೆಕ್ಟ್ ಆಗಿಯೇ ಇದ್ದಾರೆ. ಅವರಿಗೆ ಹೆಲ್ತ್ ಪ್ರಾಬ್ಲಂ ಅಂತ ಏನೇನೋ ಹಬ್ಬಿಸಬೇಡಿ ಎಂದು ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ.
ಶಿವಣ್ಣನ ಸಿನಿಮಾ ಬರ್ತಿದೆ. ಇದೇ ತಿಂಗಳು 15 ರಂದು ಈ ಚಿತ್ರ ತೆರೆಗೆ ಬರ್ತಿದೆ. ಎಲ್ಲರೂ ಅದನ್ನ ನೋಡೋಣ. ಎಲ್ಲರೂ ಅದನ್ನ ಎಂಜಾಯ್ ಮಾಡೋಣ. ಸುಮ್ನೆ ಏನೇನೋ ಸುದ್ದಿ ಹಬ್ಬಿಸಿ, ಸಿನಿಮಾ ರಿಲೀಸ್ ಸಂಭ್ರಮವನ್ನ ಹಾಳು ಮಾಡೋದು ಬೇಡ ಎಂದಿದ್ದಾರೆ.
ಶಿವರಾಜ್ ಕುಮಾರ್ ಯಾವುದನ್ನೂ ಮುಚ್ಚಿಟ್ಟಿಲ್ಲ. ಎಲ್ಲವನ್ನೂ ಓಪನ್ ಆಗಿಯೇ ಹೇಳಿಕೊಂಡಿದ್ದಾರೆ. ಇರೋ ಸಮಸ್ಯೆಯ ಕುರಿತು ಕೇಳೋ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದಾರೆ. ಯಾವುದನ್ನೂ ಮುಚ್ಚು ಮರೆ ಮಾಡದೇನೆ ಹೇಳಿಕೊಂಡಿದ್ದಾರೆ.
ನನಗೆ ಪ್ರಾಬ್ಲಂ ಇದೆ… ಆದರೆ, ಇದನ್ನ ಮುಚ್ಚಿಡೋದ್ರಲ್ಲಿ ಏನ್ ಅರ್ಥ ಇದೆ ಹೇಳಿ.? ಯಾಕೆ ಮುಚ್ಚಿಡಬೇಕು ಹೇಳಿ? ಅಂತಲೂ ಪ್ರಶ್ನೆ ಮಾಡಿದ್ದಾರೆ. ಅಸಲಿಗೆ ಶಿವಣ್ಣ ತಮ್ಮಗೆ ಆಗಿರೋ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಕೂಡ ಪಡೆಯುತ್ತಿದ್ದಾರೆ. ಈ ಮೂಲಕ ತಮ್ಮ ಹೆಲ್ತ್ ಬಗ್ಗೆ ಕೇರ್ ಕೂಡ ತೆಗೆದುಕೊಂಡಿದ್ದಾರೆ.
ಪ್ರಾಬ್ಲಂಗೆ ಟ್ರೀಟ್ಮೆಂಟ್ ನಡೆಯುತ್ತಿದೆ. ಒಂದು ಆಪರೇಷನ್ ಕೂಡ ಮಾಡಿಸೋದು ಇದೆ. ಅದನ್ನ ಇಲ್ಲಿಯೇ ಮಾಡಿಸೋದಾ? ಇಲ್ಲ ಅಮೆರಿಕಾದಲ್ಲಿ ಮಾಡಿಸೋದಾ ಅಂತ ಯೋಚನೆ ಮಾಡುತ್ತಿದ್ದಾರೆ. ಆದರೆ, ಯಾವುದು ಇನ್ನು ಡಿಸೈಡ್ ಮಾಡಿಲ್ಲ ಅಂತಲೇ ಶಿವರಾಜ್ ಕುಮಾರ್ ಹೇಳಿಕೊಂಡಿದ್ದಾರೆ.
ಸದ್ಯ ಶಿವರಾಜ್ ಕುಮಾರ್ ಭೈರತಿ ರಣಗಲ್ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಚಿತ್ರ ನವೆಂಬರ್-15 ರಂದು ರಿಲೀಸ್ ಆಗುತ್ತಿದ್ದು, ದೊಡ್ಡಮಟ್ಟದಲ್ಲಿಯೇ ರಿಲೀಸ್ ಪ್ಲಾನ್ ಮಾಡಲಾಗುತ್ತಿದೆ. ಬಹು ಭಾಷೆಯಲ್ಲೂ ಈ ಒಂದು ಸಿನಿಮಾ ರಿಲೀಸ್ ಆಗುತ್ತಿದ್ದು ಸಾಕಷ್ಟು ನಿರೀಕ್ಷೆ ಇದೆ.