ಮಂಡ್ಯ: ಮಂಡ್ಯದ ಜಿಲ್ಲಾ ಭೂ ದಾಖಲೆ ನೌಕರರ ಸಂಘದ ಆವರಣದಲ್ಲಿ ಗಾಂಜಾ ಗಿಡಗಳು ಪತ್ತೆಯಾಗಿರುವ ಘಟನೆ ಆವರಣದಲ್ಲಿ ನಡೆದಿದೆ.
ಖಚಿತ ಮಾಹಿತಿ ಆಧರಿಸಿ ನ್ಯಾಯಾಲಯದ ವಾರೆಂಟ್ ಪಡೆದು ಅಬಕಾರಿ ನಿರೀಕ್ಷಕಿ ವನಿತಾ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆಸಿದಾಗ,3 ಮೀಟರ್ ಎತ್ತರದ ಎರಡು ಗಿಡಗಳು ಪತ್ತೆಯಾಗಿವೆ. ಸುಮಾರು 50ಸಾವಿರ ಬೆಳೆ ಬಾಳುವ ಎರಡೂ ಗಾಂಜಾ ಗಿಡಗಳಾಗಿದ್ದು, ಯಾರೋ ಗಾಂಜಾ ಸೇವಿಸಿ ಬೀಜ ಬಿಸಾಡಿದಾಗ ಗಿಡಗಳು ಬೆಳೆದಿರುವ ಶಂಕೆಯಾಗಿದೆ. ಪ್ರಕರಣ ದಾಖಲಿಸಿಕೊಂಡು ಗಾಂಜಾ ಬೆಳೆದ ಆರೋಪಿಗಳ ಪತ್ತೆಗೆ ಮುಂದಾಗಿದ್ದು, ಮಂಡ್ಯ ಅಬಕಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.