ಕರಿಬೇವಿನ ಎಲೆಗಳನ್ನು ಪಾಕ ಪದ್ಧತಿಯಲ್ಲಿ ಅದರಲ್ಲೂ ಭಾರತದಲ್ಲಿ ಯಥೇಚ್ಛವಾಗಿ ಬಳಸುತ್ತೇವೆ. ಕರಿಬೇವು ಇಲ್ಲದೇ ಒಗ್ಗರಣೆ ಪೂರ್ಣವಾಗುವುದಿಲ್ಲ. ದಾಲ್ ಕರಿ, ಚಟ್ನಿ, ರಸಂ ಮಸಾಲ ಮಜ್ಜಿಗೆಯಂತಹ ಅಡುಗೆಗೆ ಎರಡು ಕರಿಬೇವಿನ ಎಲೆಗಳನ್ನು ಉದರಿಸಲೇ ಬೇಕು. ಎಣ್ಣೆಗೆ ಬಿದ್ದೊಡನೆ ಪಟ ಪಟ ಶಬ್ದ ಮಾಡುವ ಕರಿಬೇವನ್ನು ಹಾಗೇ ಹಸಿ ಹೊಟ್ಟೆಗೆ ಸೇವಿಸಿದರೇ ಸಿಗುವ ಉಪಯೋಗ ನಿಮಗೆ ಗೊತ್ತಾ .
ಹೌದು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಸೊಪ್ಪು ಜಗಿದು ತಿನ್ನುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ.
ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವನ್ನು ಸೇವಿಸಿದರೆ ಉತ್ತಮ ಫಲಿತಾಂಶವನ್ನು ನೀಡುತ್ತದೆ. ನಿಂಬೆ ರಸ ಮತ್ತು ಕರಿಬೇವಿನ ರಸವನ್ನು ಸಕ್ಕರೆಯೊಂದಿಗೆ ಒಟ್ಟಿಗೆ ಸೇವನೆ ಮಾಡಬೇಕು. ಇದು ವಾಂತಿ ಮತ್ತು ವಾಕರಿಕೆ ಮುಂತಾದ ಸಮಸ್ಯೆಗಳನ್ನು ತಡೆಯುತ್ತದೆ
ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆಗಳನ್ನು ತಿನ್ನುವುದರಿಂದ ಯಕೃತ್ತು ಆರೋಗ್ಯಕರವಾಗಿರುತ್ತದೆ. ಯಕೃತ್ತಿನ ಕಾರ್ಯವನ್ನು ಸುಧಾರಿಸಲು ಕರಿಬೇವು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಕರಿಬೇವು ಲಿವರ್ ಸಿರೋಸಿಸ್ ಅಪಾಯವನ್ನು ಕಡಿಮೆ ಮಾಡುತ್ತದೆ
ಕರಿಬೇವು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿನ್ನುವುದರಿಂದ ಹೊಟ್ಟೆನೋವು ನಿವಾರಣೆಯಾಗುವುದಲ್ಲದೆ ಮಲಬದ್ಧತೆ, ಆಮ್ಲೀಯತೆ ಮತ್ತು ಅಜೀರ್ಣ ನಿವಾರಣೆಯಾಗುತ್ತದೆ. ಇದಕ್ಕೆ ಮೊಸರು ಅಥವಾ ಮಜ್ಜಿಗೆಯೊಂದಿಗೆ ಕರಿಬೇವನ್ನು ಸೇವನೆ ಮಾಡಬೇಕು.
ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಒಮ್ಮೆ ಕರಿಬೇವನ್ನು ಬಳಸಿ ನೋಡಿ. ಕರಿಬೇವು ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ ಪ್ರತಿದಿನ ಬೆಳಿಗ್ಗೆ ತುಳಸಿ ಎಲೆಗಳೊಂದಿಗೆ ಕರಿಬೇವನ್ನು ತಿನ್ನಿ
ಕರಿಬೇವು ವಿಟಮಿನ್-ಎ ಸಮೃದ್ಧವಾಗಿದೆ. ಅದಕ್ಕಾಗಿಯೇ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆಗಳನ್ನು ಸೇವಿಸುವುದು ತುಂಬಾ ಪ್ರಯೋಜನಕಾರಿಯಾಗಿದೆ. ಇದು ದೃಷ್ಟಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಕಣ್ಣುಗಳನ್ನು ಆರೋಗ್ಯವಾಗಿಡಲು ಬಹಳಷ್ಟು ಸಹಾಯ ಮಾಡುತ್ತದೆ.