ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಶೆಡ್ ದುರಂತ ಸಂಭವಿಸಿದ್ದು, ಡಬಲ್ ಮರ್ಡರ್ ಜರುಗಿದೆ. ರಾಜಧಾನಿ ಬೆಂಗಳೂರು ನಗರದ ಹೊರವಲಯದ ಸಿಂಗನಗಳ್ಳಿ ಶೆಡ್ನಲ್ಲಿ ಖಾಸಗಿ ಬಸ್ನ ಇಬ್ಬರು ಸಿಬ್ಬಂದಿ ಕೊಲೆಯಾಗಿರುವ ಘಟನೆ ನಡೆದಿದೆ.
ನಾಗೇಶ್, ಮಂಜೇಗೌಡ ಮೃತರು. ಇವರು ಖಾಸಗಿ ಬಸ್ನ ಕ್ಲೀನರ್ಗಳಾಗಿ ಕಾರ್ಯನಿರ್ವಹಿಸುತ್ತಿದ್ದರುರಾತ್ರಿ ಕುಡಿದ ಅಮಲಿನಲ್ಲಿ ಹೊಡೆದಾಡಿಕೊಂಡ ಪರಿಣಾಮ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಸಿಂಗನಗಳ್ಳಿ ಶೆಡ್ನಲ್ಲಿ ಒಟ್ಟಿಗೆ ಡಬಲ್ ಮರ್ಡರ್ಗಳಾಗಿವೆ. ಆದರೆ ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.