ಬೆಂಗಳೂರು:- ಕರ್ನಾಟಕ ವಿವಿ ವಿದ್ಯಾರ್ಥಿಗಳಿಗೆ ವಿದೇಶಿ ಪ್ರವಾಸ ಭಾಗ್ಯ ಬಂದಿದೆ. ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳು ಬ್ರಿಟಿಷ್ ಕೌನ್ಸಿಲ್ನೊಂದಿಗೆ ಮಾಡಿಕೊಂಡಿರುವ ಶೈಕ್ಷಣಿಕ ಒಪ್ಪಂದದ ಹಿನ್ನೆಲೆಯಲ್ಲಿ ರಾಜ್ಯದ ಆರು ವಿಶ್ವವಿದ್ಯಾಲಯಗಳ 30 ವಿದ್ಯಾರ್ಥಿಗಳು ಹಾಗೂ ಆರು ಮಂದಿ ಆಧ್ಯಾಪಕರು ಯುನೈಟೆಡ್ ಕಿಂಗ್ಡಂನ ಈಸ್ಟ್ ಲಂಡನ್ ವಿಶ್ವವಿದ್ಯಾಲಯಕ್ಕೆ ತೆರಳಿದ್ದಾರೆ.
ಅಷ್ಟೇ ಅಲ್ಲದೆ, ಕರ್ನಾಟಕದ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಕೂಡಾ ಮಾಹಿತಿ ವಿನಿಮಯ ಮಾಡಿಕೊಳ್ಳಲಿದ್ದಾರೆ. ಈ ಪ್ರವಾಸ ಯಶಸ್ವಿಯಾದರೆ ಮುಂದಿನ ವರ್ಷದಿಂದ ರಾಜ್ಯದ ವಿವಿಗಳಿಗೆ ಪ್ರತಿ ವರ್ಷ ವಿದೇಶಿ ಪ್ರವಾಸ ಹಾಗೂ ಕಲಿಕಾ ಚಟುವಟಿ ಖಾತರಿಯಾಗಲಿದೆ.
ವಿವಿ ವಿದ್ಯಾರ್ಥಿಗಳ ಭವಿಷ್ಯದ ಕಲಿಕೆಯ ದೃಷ್ಟಿಯಿಂದ ಈ ಅಂತಾರಾಷ್ಟ್ರೀಯ ಪ್ರವಾಸ ಹಾಗೂ ಕಲಿಕೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಈಸ್ಟ್ ಲಂಡನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಕಲಿಕೆಯ ವಿವರಗಳ ಕುರಿತು ಉನ್ನತ ಶಿಕ್ಷಣ ಸಚಿವರಾದ ಡಾ. ಎಂಸಿ ಸುಧಾಕರ್ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡಿದ್ದಾರೆ.
ಬೆಂಗಳೂರು ಜ್ಞಾನಭಾರತಿ ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯದ ಆರು ವಿಶ್ವವಿದ್ಯಾಲಯಗಳ 30 ವಿದ್ಯಾರ್ಥಿಗಳು ಹಾಗೂ ಆರು ಮಂದಿ ಆಧ್ಯಾಪಕರು ಯುನೈಟೆಡ್ ಕಿಂಗ್ಡಂನ ಈಸ್ಟ್ ಲಂಡನ್ ವಿಶ್ವವಿದ್ಯಾಲಯ ತೆರಳಿರುವುದು ವಿದ್ಯಾರ್ಥಿಗಳಿಗೆ ಸಾಕಷ್ಟು ಖುಷಿ ನೀಡಿದೆ. ಈ ಬಗ್ಗೆ ವಿದ್ಯಾರ್ಥಿನಿ ನಂದಿನಿ ಹರ್ಷ ವ್ಯಕ್ತಪಡಿಸಿದ್ದಾರೆ.