ಬೆನ್ನುಮೂಳೆಯ ಡಿಸ್ಕ್ಲೊಕೇಟ್ (ಬೆನ್ನು ಮೂಳೆ ಪಲ್ಲಟಗೊಳ್ಳುವುದು) ಆಗಿದ್ದ ಪರಿಣಾಮ, ಪಾರ್ಶ್ವವಾಯುಗೆ ಒಳಗಾಗಬೇಕಿದ್ದ 111 ಕೆ.ಜಿ. ತೂಕದ 15 ವರ್ಷದ ಬಾಲಕನಿಗೆ, ʻಮೈಕ್ರೋ-ಲುಂಬಾರ್ ಡಿಸ್ಸೆಕ್ಟಮಿ ಎಂಬ ಕಾಲು ಉಳಿಸುವ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಯನ್ನು ಬನ್ನೇರುಘಟ್ಟ ಫೋರ್ಟಿಸ್ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿ ಮಾಡಿದೆ.
ಫೋರ್ಟಿಸ್ ಆಸ್ಪತ್ರೆಯ ನರಶಸ್ತ್ರಚಿಕಿತ್ಸಕ ಸಲಹೆಗಾರ ಡಾ.ವಿ ಗಣೇಶ್ ನೇತೃತ್ವದ ತಂಡ ಒಂದು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದೆ.
ಈ ಕುರಿತು ಮಾತನಾಡಿದ ವೈದ್ಯರು, 111 ಕೆ.ಜಿ. ತೂಕವಿದ್ದ 15 ವರ್ಷದ ಸೈಯದ್ ಸಲಾಹುದೀನ್ ಕ್ವಾದ್ರಿ ಎಂಬ ಬಾಲಕನಿಗೆ ಕಾರಣಾಂತರಗಳಿಂದ ಬೆನ್ನಿನ ಮೂಳೆಯ ಡಿಸ್ಲೊಕೇಟ್ ನಿಂದ ಅಸಾಧ್ಯ ನೋವು ಕಾಣಿಸಿಕೊಂಡಿತ್ತು. ಈ ನೋವು ಕ್ರಮೇಣ ಬೆನ್ನಿನಿಂದ ಕಣಕಾಲುವರೆಗೂ ಹಬ್ಬಿತ್ತು. 4 ತಿಂಗಳ ಕಾಲ ಈ ನೋವನ್ನು ಹಾಗೆಯೇ ನಿರ್ಲಕ್ಷಿಸಿದ್ದರು. ಇದರಿಂದಾಗಿ ಬಾಲಕ ನಡೆಯಲು ಹಾಗೂ ಕೂರಲು ಸಹ ಆಗದಷ್ಟು ಅಗಾಧ ನೋವಿಗೆ ಒಳಗಾಗಿದ್ದ.
ಫೋರ್ಟಿಸ್ ಆಸ್ಪತ್ರೆಗೆ ದಾಖಲಾದ ಬಳಿಕ ಅವರಿಗೆ MRI ಸ್ಕ್ಯಾನ್ ಮಾಡುವ ಮೂಲಕ ಅವರ ಬೆನ್ನುಮೂಳೆಯ L3-L4 ಮಟ್ಟದಲ್ಲಿ ತೀವ್ರವಾದ ಪೋಸ್ಟರೊಸೆಂಟ್ರಲ್ ಡಿಸ್ಕ್ ಎಕ್ಸ್ಟ್ರಶನ್ ಆಗಿರುವುದು ಬಹಿರಂಗವಾಯಿತು. ಹೀಗಾಗಿ ಬಾಲಕನ ಕಣಕಾಲಿನವರೆಗೂ ಡಿಸ್ಲೊಕೇಟ್ನ ಪರಿಣಾಮ ಸಂಭವಿಸಿತ್ತು. ಬಾಲಕ ಈ ನೋವನ್ನು ಹೀಗೆಯೇ ನಿರ್ಲಕ್ಷ್ಯ ಮಾಡಿದ್ದರೇ ಮುಂದೊಂದುದಿನ ಆ ಕಾಲು ಪಾರ್ಶ್ವವಾಯುವಿಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿಯೇ ಇತ್ತು.
ಬಾಲಕನ ಆರೋಗ್ಯದ ಗಂಭೀರತೆ ಪರಿಗಣಿಸಿ ಆತನಿಗೆ ಮೈಕ್ರೊ-ಲುಂಬರ್ ಡಿಸೆಕ್ಟಮಿ ಶಸ್ತ್ರಚಿಕಿತ್ಸೆಯನ್ನು ಶಿಫಾರಸು ಮಾಡಿದೆವು. ಇದು ನರಗಳ ಮೇಲಿನ ಒತ್ತಡ ನಿವಾರಿಸಲು ಡಿಸ್ಲೊಕೇಟ್ ಆಗಿರುವ ಡಿಸ್ಕ್ ಅನ್ನು ತೆಗೆದುಹಾಕುವ ಶಸ್ತ್ರಚಿಕಿತ್ಸಾ ವಿಧಾನವಾಗಿದೆ. ಬಾಲಕನ ತೂಕ ಅಧಿಕವಾಗಿದ್ದರಿಂದ ಈ ಶಸ್ತ್ರಚಿಕಿತ್ಸೆ ಸಾಕಷ್ಟು ಸವಾಲಾಗಿತ್ತು, ಆದರೂ ನಮ್ಮ ತಂಡ ಕಾರ್ಯಕ್ರಮತೆಯಿಂದ ಸುರಕ್ಷತೆಯಾಗಿ ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಈ ಶಸ್ತ್ರಚಿಕಿತ್ಸೆಯ ನಂತರ ಬಾಲಕನ ನೋವು ಸಂಪೂರ್ಣ ನಿವಾರಣೆಯಾಗಿದ್ದು,