ರಾಮನಗರ: ಹಲವು ದಿನಗಳಿಂದ ಗ್ರಾಮದಲ್ಲಿ ಕಾಣಿಸಿಕೊಂಡು ಜನರ ಆತಂಕಕ್ಕೆ ಕಾರಣವಾಗಿದ್ದ 3 ವರ್ಷದ ಗಂಡು ಚಿರತೆಯೊಂದು ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ. ಹಾರೋಹಳ್ಳಿ ತಾಲೂಕಿನ ಬನವಾಸಿ ಗ್ರಾಮ ಪಂಚಾಯಿತಿ ಬಳಿಯ ಅರೆಗಡಕಲು ಗ್ರಾಮದಲ್ಲಿ ಚಿರತೆ ಸೆರೆಯಾಗಿದೆ.
ಹಲವು ದಿನಗಳಿಂದ ತೊಂದರೆ ಕೊಡುತ್ತಿದ್ದು, ಹೀಗಾಗಿ ಗ್ರಾಮದ ಸಮೀಪ ಬೋನುಗಳನ್ನ ಇಟ್ಟು ನರಭಕ್ಷಕ ಚಿರತೆಯನ್ನ ಸೆರೆ ಹಿಡಿಯಲು ಅರಣ್ಯ ಇಲಾಖೆ ಮುಂದಾಗಿತ್ತು. ಎರಡು ದಿನದ ಹಿಂದೆ ಅರೆಗಡಕಲು ಗ್ರಾಮದಲ್ಲಿನ ತೋಟವೊಂದರಲ್ಲಿ ಅರಣ್ಯ ಇಲಾಖೆ ಬೋನು ಇರಿಸಿದ್ದು, ಇಂದು ಬೆಳಿಗ್ಗೆ ಬೋನಿಗೆ ಬಿದ್ದಿದೆ.