ಹೆತ್ತ ಮಕ್ಕಳನ್ನು ಬಿಟ್ಟು 25 ವರ್ಷದ ಯುವಕನ ಜೊತೆಗೆ ತಾಯಿಯೊಬ್ಬಳು ಓಡಿ ಹೋದ ಘಟನೆ ಬೆಳಗಾವಿ ನಗರದ ಗಣೇಶಪುರದಲ್ಲಿ ನಡೆದಿದೆ. ತಾಯಿಗಾಗಿ ಬೆಳಗಾವಿ ಕ್ಯಾಂಪ್ ಪೊಲೀಸರಿಗೆ ಮಕ್ಕಳು ದೂರು ನೀಡಿದ್ದಾರೆ. ಹೆತ್ತ ಮಕ್ಕಳನ್ನು ಬೀದಿಗೆ ಬಿಟ್ಟು ಬೇರೆ ಯುವಕನ ಜೊತೆಗೆ ಮಹಿಳೆ ನೆಲೆಸಿದ್ದಾರೆ.
ಸರ್ಕಾರಿ ನೌಕರಿಯಲ್ಲಿದ್ದ ತಂದೆಯ ಅಕಾಲಿಕ ನಿಧನದ ಬಳಿಕ ಅನುಕಂಪದ ಆಧಾರದಲ್ಲಿ ತಾಯಿ ನೌಕರಿ ಗಿಟ್ಟಿಸಿಕೊಂಡಿದ್ದಳು.
ತಂದೆ ತೀರಿ ಹೋದ ಬಳಿಕ ತಾಯಿಯ ಆಶ್ರಯದಲ್ಲಿದ್ದ ಎಲ್ಲಾ ಮೂವರು ಮಕ್ಕಳೀಗ ಬೀದಿಗೆ ಬಿದ್ದಿದ್ದಾರೆ. ಬೆಳಗಾವಿ ನಗರದ ಗಣೇಶಪುರದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಕಳೆದ ಕೆಲ ತಿಂಗಳಿಂದ ಮಕ್ಕಳನ್ನು ಬಿಟ್ಟು ಯುವಕನ ಜೊತೆಗೆ ಮಹಿಳೆ ನೆಲೆಸಿದ್ದಾಗಿ ವರದಿಯಾಗಿದೆ.
ಈ ನಡುವೆ ಮೂವರು ಮಕ್ಕಳು ತಾಯಿ ಕಾಣೆಯಾಗಿದ್ದಾಳೆಂದು ಕ್ಯಾಂಪ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಪೊಲೀಸರು ಸೂಕ್ತ ತನಿಖೆ ನಡೆಸಿದ ಬಳಿಕ ತಾಯಿ ಬೇರೊಬ್ಬನ ಜೊತೆಗೆ ವಾಸ ಮಾಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ
ಆತನನ್ನು ಬಿಟ್ಟು ತಮ್ಮ ಜೊತೆಗೆ ಬರುವಂತೆ ಹಲವು ಬಾರಿ ಮಕ್ಕಳು ಮಾಡಿಕೊಂಡಿದ್ದಾರೆ. ಈ ವೇಳೆ 40 ವರ್ಷದ ತಾಯಿ, ನಿಮ್ಮೊಂದಿಗೆ ಬರಲು ಸಾಧ್ಯವಿಲ್ಲ ಎಂದು ಹಠ ಹಿಡಿದು ಕುಳಿತುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೂವರು ಗಂಡು ಮಕ್ಕಳು ಕ್ಯಾಂಪ್ ಪೊಲೀಸರ ಮೊರೆ ಹೋಗಿದ್ದಾರೆ. ಇನ್ನೊಂದೆಡೆ ತಾಯಿ ಮಾತ್ರ ಯಾವುದೇ ಕಾರಣಕ್ಕೂ ತಾನು ಮಕ್ಕಳೊಂದಿಗೆ ಹೋಗೋದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಈ ಪ್ರಕರಣದಲ್ಲಿ ಮುಂದಿನ ಕ್ರಮವೇನು ಅನ್ನೋದೇ ಪೊಲೀಸರಿಗೆ ತಲೆಬಿಸಿಯಾಗಿದೆ.