ಪುಣೆ:- ವಿಡಿಯೋ ನೋಡುತ್ತಲೇ 3 ವರ್ಷದ ಮಗು ಮೇಲೆ 9 ವರ್ಷದ ಬಾಲಕ ರೇಪ್ ಮಾಡಿದ ಘಟನೆ ಜರುಗಿದೆ.
ಬಾಲಕನನ್ನು ಪುಣೆಯ ಕೊಂಡ್ವಾ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಬಾಲಕನನ್ನು ಜುವೆನೈಲ್ ಜಸ್ಟೀಸ್ ಬೋರ್ಡ್ ಮುಂದೆ ಹಾಜರುಪಡಿಸಲಾಯಿತು. ಆ ಕೋರ್ಟ್ ಅವನಿಗೆ ಜಾಮೀನು ನೀಡಿತು. ಆತನನ್ನು ಅವನ ಹೆತ್ತವರ ಜೊತೆ ಕಳುಹಿಸಿತು.
ಪುಣೆಯಲ್ಲಿ ಒಂದೇ ಏರಿಯಾದಲ್ಲಿ ಅಕ್ಕಪಕ್ಕದ ಮನೆಗಳಲ್ಲಿ ವಾಸಿಸುತ್ತಿದ್ದ ಹುಡುಗ ಮತ್ತು ಮಗುವಿನ ಕುಟುಂಬಗಳು ಆಪ್ತ ಸಂಬಂಧ ಹೊಂದಿದ್ದವು. ಎರಡೂ ಮನೆಯವರು ಪರಸ್ಪರರ ಮನೆಗೆ ಬಂದು ಹೋಗಿ ಮಾಡುತ್ತಿದ್ದರು. ಇಬ್ಬರೂ ಮನೆಯ ಹೊರಗೆ ಆಟವಾಡುತ್ತಿದ್ದರು. ಆ ಮಗು ಆರೋಪಿ ಹುಡುಗನನ್ನು ದಾದಾ ಎಂದು ಕರೆಯುತ್ತಿತ್ತು ಎಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸ್ನೇಹಲ್ ಜಾಧವ್ ಹೇಳಿದ್ದಾರೆ.
ಆ ಹೆಣ್ಣು ಮಗು ತನ್ನ ಮನೆಯ ಬಳಿ ಒಬ್ಬಳೇ ಇದ್ದಾಗ ಲೈಂಗಿಕ ದೌರ್ಜನ್ಯ ನಡೆದಿದ್ದು, ಆಕೆ ತನ್ನ ತಾಯಿಗೆ ತಿಳಿಸಿದಾಗ ವಿಷಯ ಬೆಳಕಿಗೆ ಬಂದಿದೆ.